Saturday, May 18, 2024
spot_imgspot_img
spot_imgspot_img

ಉಡುಪಿ: ಗದ್ದೆಗಿಳಿದು ಕಳೆ ಕೀಳುವ ಮೂಲಕ ರೈತರೊಂದಿಗೆ ಕೈ ಜೋಡಿಸಿದ ಶೋಭಾ ಕರಂದ್ಲಾಜೆ

- Advertisement -G L Acharya panikkar
- Advertisement -

ಉಡುಪಿ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆ ಪ್ರಯುಕ್ತ ಉಡುಪಿ ಪ್ರವಾಸದಲ್ಲಿರುವ ಅವರು ಗುರುವಾರ ಕಡೇಕಾರು ಗ್ರಾಮದಲ್ಲಿ ಭತ್ತದ ಗದ್ದೆಯಲ್ಲಿ ಕಳೆ ಕೀಳುವ ಮೂಲಕ ರೈತರೊಂದಿಗೆ ಕೈ ಜೋಡಿಸಿದರು.

ಕೇಂದ್ರ ಸಚಿವೆಯಾದ ಬಳಿಕ ಶೋಭಾ ಕರಂದ್ಲಾಜೆ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿ, ಬೆಳಿಗ್ಗೆ ಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ ಪಡೆದರು. ಬಳಿಕ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಅವರಿಂದ ಫಲ ಮಂತ್ರಾಕ್ಷತೆ ಪಡೆದರು.

ಶಾಸಕ ರಘುಪತಿ ಭಟ್ ಅವರ ಮಾರ್ಗದರ್ಶನದಲ್ಲಿ ಕೇದಾರೋತ್ಥಾನ ಟ್ರಸ್ಟ್‌ನಿಂದ ಉಡುಪಿ ತಾಲ್ಲೂಕಿನಾದ್ಯಂತ ಹಡಿಲುಭೂಮಿ ಕೃಷಿ ಆಂದೋಲನದ ಅಂಗವಾಗಿ ಭತ್ತದ ಗದ್ದೆಯ ಕಳೆ ಕೀಳುವ ಕೆಲಸದಲ್ಲಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಗದ್ದೆಗೆ ಇಳಿದು ಕಳೆ ಕಿತ್ತರು.

ವಿಶ್ವಸಂಸ್ಥೆಯಲ್ಲಿ ಭಾರತವು ರಾಗಿಗಳನ್ನು ಅಂತಾರಾಷ್ಟ್ರೀಯವಾಗಿ ಪರಿಗಣಿಸಲು ನಿರ್ಣಯವನ್ನು ಅಂಗೀಕರಿಸಬೇಕೆಂದು ಪ್ರಸ್ತಾಪಿಸಿದ ಬಳಿಕ ಎಲ್ಲಾ ಸದಸ್ಯ ರಾಷ್ಟ್ರಗಳು ಈ ಪರವಾಗಿ ಮತ ಚಲಾಯಿಸಿವೆ ಅಲ್ಲದೆ 2023 ಅನ್ನು ‘ಅಂತರರಾಷ್ಟ್ರೀಯ ರಾಗಿ ವರ್ಷ’ ಎಂದು ಘೋಷಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

- Advertisement -

Related news

error: Content is protected !!