Tuesday, May 21, 2024
spot_imgspot_img
spot_imgspot_img

ಉಡುಪಿ: ಜಯಲಕ್ಷ್ಮಿ ಸಿಲ್ಕ್ ವಿರುದ್ಧ ಸುಳ್ಳು ಸುದ್ದಿ ವೈರಲ್: ಮಾಲೀಕರಿಂದ ಸ್ಪಷ್ಟನೆ

- Advertisement -G L Acharya panikkar
- Advertisement -

ಉಡುಪಿ: ಹಿಜಾಬ್, ಹಲಾಲ್, ಮೈಕ್ ವಿಚಾರವಾಗಿ ನಡೆಯುತ್ತಿರುವ ಧರ್ಮ ದಂಗಲ್ ಉಡುಪಿಯಲ್ಲಿ ಮತ್ತೊಂದು ಸ್ವರೂಪ ಪಡೆದಿದೆ. ಹಿಂದೂಗಳಿಗೆ ಸೇರಿದ ಬಟ್ಟೆ ಮಳಿಗೆಗಳಿಗೆ ಮುಸ್ಲಿಮರು ಹೋಗಬಾರದು ಎಂಬ ಪೋಸ್ಟ್ ಈಗ ಕರಾವಳಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದುವೆ ವಸ್ತ್ರಗಳಿಗೆ ಪ್ರಸಿದ್ದಿ ಪಡೆದ ಉಡುಪಿಯ ಉದ್ಯಾವರ ಜಯಲಕ್ಷ್ಮಿ ಸಿಲ್ಕ್ ಮಳಿಗೆಗೆ ಮುಸ್ಲಿಂ ಗ್ರಾಹಕರು ಹೋಗಬಾರದು ಅಂತಾ ಪೋಸ್ಟ್ ವೈರಲ್ ಆಗುತ್ತಿದೆ. ಒಂದು ಪೋಸ್ಟ್‌ನಲ್ಲಿ ನಮ್ಮ ಬಟ್ಟೆ ಮಳಿಗೆಯಲ್ಲಿ ಮುಸ್ಲಿಂ ಗ್ರಾಹಕರಿಗೆ ಅವಶ್ಯಕತೆ ಇಲ್ಲ ಎಂಬ ಪೋಸ್ಟ್ ವೈರಲ್ ಆಗಿದೆ. ಉಡುಪಿಯ ಪ್ರಸಿದ್ದ ಉದ್ಯಾವರ ಜಯಲಕ್ಷ್ಮಿ ಮಳಿಗೆಯ ಪೋಸ್ಟ್ ದುರುಪಯೋಗ ಮಾಡಲಾಗಿದ್ದು, ದೂರವಾಣಿ ಸಂಖ್ಯೆ ಇರುವ ಸ್ಥಳದಲ್ಲಿ ಮುಸ್ಲಿಂ ಗ್ರಾಹಕರ ಅವಶ್ಯಕತೆ ಇಲ್ಲವೆಂದು ಬರೆಯಲಾಗಿದೆ. ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ಫೇಕ್ ಪೋಸ್ಟ್ ವೈರಲ್ ಆಗಿದೆ.

ಆದರೆ ಇದೊಂದು ಫೇಕ್ ಪೋಸ್ಟ್ ಅಂತಾ ಮಳಿಗೆ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ. ಎರಡು ವರ್ಷದ ಹಿಂದೆ ಇದೇ ಮಳಿಗೆಗೆ ಮುಸ್ಲಿಂಮರಿಗೆ ಪ್ರವೇಶವಿಲ್ಲ ಎಂಬ ನಕಲಿ ಪೋಸ್ಟ್ ವೈರಲ್ ಮಾಡಲಾಗಿತ್ತು. ನಕಲಿ ಪೋಸ್ಟ್ ವೈರಲ್‌ ಮಾಡಿದ್ದ ಅಕ್ಬರ್ ಅಹ್ಮದ್ ಎಂಬಾತ ಬಳಿಕ ಕ್ಷಮೆಯಾಚನೆ ಮಾಡಿದ್ದ. ಇದೀಗ ಕಿಡಿಗೇಡಿಗಳು ಹಳೆ‌ಯ ನಕಲಿ ಪೋಸ್ಟರ್ ಮತ್ತೆ ವೈರಲ್ ಮಾಡಿದ್ದು ಈ ಬಗ್ಗೆ ಉಡುಪಿ‌ ಪೊಲೀಸ್ ಠಾಣೆಯಲ್ಲಿ ಉದ್ಯಾವರ ಜಯಲಕ್ಷ್ಮೀ ಸಿಲ್ಕ್ ಮಾಲೀಕರು ದೂರು ಸಲ್ಲಿಸಿದ್ದಾರೆ.

“ನಮ್ಮಲ್ಲಿ ಮುಸ್ಲಿಂ ಗ್ರಾಹಕರು ಕಡಿಮೆಯಾಗಿಲ್ಲ. ಎಲ್ಲಾ ಗ್ರಾಹಕರಿಗೆ ಇದೊಂದು ಸುಳ್ಳು ಪೋಸ್ಟ್ ಎಂದು ಮಾಹಿತಿ ನೀಡಿದ್ದೇವೆ. ಈ ಬಗ್ಗೆ ದೂರನ್ನು ದಾಖಲಿಸಿದ್ದೇವೆ. ನಮ್ಮ‌ ಮಳಿಗೆಯನ್ನು ಗುರಿಯಾಗಿರಿಸಿ ಮಾನಸಿಕ ಅಸ್ವಸ್ಥರು ಈ ಕೃತ್ಯ ಎಸಗಿದ್ದಾರೆ. ಈವರಗೆ ನಾವು ಯಾವುದೇ ಜಾತಿ ತಾರತಮ್ಯ ಮಾಡಿಲ್ಲ, ಮಾಡುವುದೂ ಇಲ್ಲ” ಎಂದು ಜಯಲಕ್ಷ್ಮಿ ಮಳಿಗೆ ಮಾಲೀಕ ರವೀಂದ್ರ ಸ್ಪಷ್ಟೀಕರಣ ನೀಡಿದ್ದಾರೆ.

ಇನ್ನೊಂದು ಪೋಸ್ಟ್‌ನಲ್ಲಿ ಜಯಲಕ್ಷ್ಮಿ ಮಳಿಗೆ ಫೋಟೋ ಬಳಸಿ ರಂಜಾನ್ ಹಿನ್ನಲೆ ಹಿಂದೂ‌ ಬಟ್ಟೆ ಮಳಿಗೆಯಲ್ಲಿ ಖರೀದಿ‌ ಮಾಡಬೇಡಿ ಎಂಬ ಪೋಸ್ಟ್ ಕೂಡಾ ವೈರಲ್ ಆಗಿದೆ. ನಮ್ಮ ಹಣ ನಮ್ಮನ್ನು ಕೊಲ್ಲಲು ಆಯುಧವಾಗದಿರಲಿ ಎಚ್ಚರ. ನಮ್ಮ‌ ಸಮುದಾಯದ ಏಳಿಗೆಗಾಗಿ ದುಡಿಯುವ ಮುಸ್ಲಿಂ ಮಾಲೀಕತ್ವದ ಮಳಿಗೆ ‌ನಿಮ್ಮ ಆಯ್ಕೆ ಆಗಿರಲಿ ‌ಎಂಬ ಪೋಸ್ಟ್ ವೈರಲ್ ಆಗಿದೆ.

vtv vitla
vtv vitla
- Advertisement -

Related news

error: Content is protected !!