Monday, June 15, 2026
spot_imgspot_img
spot_imgspot_img

ಮಾಣಿಲ: ಶ್ರೀ ವಿಷ್ಣುಮೂರ್ತಿ ಗೆಳೆಯರ ಬಳಗ (VFC) ಇದರ ಹತ್ತನೇ ವಾರ್ಷಿಕೋತ್ಸವ- ಕುಣಿತ ಭಜನಾ ಸ್ಪರ್ಧೆಯಲ್ಲಿ ಶ್ರೀ ನವದುರ್ಗಾ ಭಜನಾ ಮಂಡಳಿ ಪುಳಿಕುತ್ತಿ ಉಪ್ಪಳ ತಂಡ ಪ್ರಥಮ ಸ್ಥಾನ

- Advertisement -
- Advertisement -

ಮಾಣಿಲ: ಶ್ರೀ ವಿಷ್ಣುಮೂರ್ತಿ ಗೆಳೆಯರ ಬಳಗ (VFC) ಇದರ ಹತ್ತನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಿದ ಕುಣಿತ ಭಜನಾ ಸ್ಪರ್ಧೆಯಲ್ಲಿ ಶ್ರೀ ನವದುರ್ಗಾ ಭಜನಾ ಮಂಡಳಿ ಪುಳಿಕುತ್ತಿ ಉಪ್ಪಳ ತಂಡವು ಪ್ರಥಮ ಸ್ಥಾನ ಪಡೆದಿದೆ.

ಹಲವು ನಿಯಮಗಳೊಂದಿಗೆ ಎರಡು ಸುತ್ತಿನಲ್ಲಿ ನಡೆದ ಕುಣಿತ ಭಜನಾ ಸ್ಪರ್ಧೆಯು ಮೊದಲ ಸುತ್ತಿನಲ್ಲಿ ತಂಡದ ಆಯ್ಕೆಯ ಭಜನೆಯೊಂದಿಗೆ ಕುಣಿತ ಭಜನೆಯನ್ನು ನಡೆಸಲಾಯಿತು. ಎರಡನೇ ಸುತ್ತಿಗೆ ಆಯ್ಕೆಯಾದ ತಂಡಗಳಿಗೆ ತೀರ್ಪುಗಾರರು ನೀಡಿದ ಭಜನೆಯನ್ನು ಹಾಡಿ ಹೆಜ್ಜೆ ಹಾಕುವುದರ ಮೂಲಕ ಸ್ಪರ್ಧೆ ನಡೆಸಲಾಯಿತು. ಸುಮಾರು ತಂಡಗಳು ಈ ಕುಣಿತ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕುಣಿತ ಭಜನೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಶ್ರೀ ನವದುರ್ಗಾ ಭಜನಾ ಮಂಡಳಿ ಪುಳಿಕುತ್ತಿ ಉಪ್ಪಳ ತಂಡವು 11,111/- (ಹನ್ನೊಂದು ಸಾವಿರದ ನೂರ ಹನ್ನೊಂದು) ರೂ. ನಗದು ಹಾಗೂ ಶಾಶ್ವತ ಫಲಕದೊಂದಿಗೆ ವಿಜೇತರಾಗಿ ಹೊರಹೊಮ್ಮಿದರು.

- Advertisement -

Related news

error: Content is protected !!