Sunday, June 21, 2026
spot_imgspot_img
spot_imgspot_img

ಉಡುಪಿ: ತಂದೆ-ಮಗನಿಗೆ ಅಪಘಾತ ಪ್ರಕರಣ: ಚಿಕಿತ್ಸೆ ಫಲಿಸದೇ ಮಗನೂ ಮೃತ್ಯು

- Advertisement -
- Advertisement -

ಪಡುಬಿದ್ರೆ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದ ಅಪಘಾತದಲ್ಲಿ ಬೆಳಗಾವಿ ಮೂಲದ ಪ್ರಭಾಕರ್ ಶಂಕರ್ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಅವರ ಮಗ ಸಮರ್ಥ್ ಇವತ್ತು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಕಾಪು ಬಳಿಯ ಆನೆಗುಂದಿ ಸರಸ್ವತಿ ಪೀಠದಲ್ಲಿ ಸಮರ್ಥ್ ಏಳನೇ ತರಗತಿಯಲ್ಲಿ ಓದುತ್ತಿದ್ದರು. ಗಣೇಶನ ಹಬ್ಬಕ್ಕೆ ರಜೆಯಲ್ಲಿ ಊರಿಗೆಂದು ತೆರಳಿದ್ದರು. ಸಮರ್ಥ್, ಮಂಗಳವಾರ ಸಂಜೆ ಬೆಳಗಾವಿಯ ಹುಕ್ಕೇರಿ ಭಗವಾನ್ ಗಲ್ಲಿಯ ನಿವಾಸಿ ತಂದೆ ಪ್ರಭಾಕರ್ ಜೊತೆ ಹೊರಟವರು ಉಚ್ಚಿಲಕ್ಕೆ ಬುಧವಾರ ಬೆಳಿಗ್ಗೆ ಸರಕಾರಿ ಬಸ್ಸಿನಲ್ಲಿ ಆಗಮಿಸಿದ್ದರು.

ಬಸ್ಸಿನಿಂದ ಇಳಿದು ನಿಂತಿದ್ದಾಗ ಅವರಿಚಿತ ವಾಹನ ಡಿಕ್ಕಿಯಾಗಿ ಪ್ರಭಾಕರ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಗ ಸಮರ್ಥ್ ತೀವ್ರ ಗಾಯಗೊಂಡು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದುರು ದುರದೃಷ್ಟವಶಾತ್ ಗುರುವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಈ ಘಟನೆಯಿಂದಾಗಿ ಬೆಳಗಾವಿಯ ಕುಟುಂಬಕ್ಕೆ ಬರಸಿಡಿಲು ಎರಗಿದಂತಾಗಿದೆ.

- Advertisement -

Related news

error: Content is protected !!