Saturday, June 13, 2026
spot_imgspot_img
spot_imgspot_img

ಉಡುಪಿ: ನಾಪತ್ತೆಯಾಗಿದ್ದ ಆಟೋ ಚಾಲಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

- Advertisement -
- Advertisement -
driving

ಉಡುಪಿ: ನಾಪತ್ತೆಯಾಗಿದ್ದ ಆಟೋ ಚಾಲಕ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ರವಿಚಂದ್ರ ಕುಲಾಲ್ (33) ಎನ್ನಲಾಗಿದೆ.

ಆಟೋ ಚಾಲಕರಾಗಿದ್ದ ರವಿಚಂದ್ರ ಕುಲಾಲ ಸೋಮವಾರ ಮಧ್ಯಾಹ್ನದ ಸುಮಾರಿಗೆ ತನ್ನ ಆಟೋ ರಿಕ್ಷಾವನ್ನು ವಕ್ಕಾಡಿ ನವನಗರ ತಿರುವಿನಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದರು. ಸ್ನೇಹಿತರು ಹಾಗೂ ಕುಟುಂಬಿಕರು ನಿರಂತರವಾಗಿ ಕರೆ ಮಾಡಿದರೂ ಕೂಡ ರವಿಚಂದ್ರ ಕರೆ ಸ್ವೀಕರಿಸಿರಲಿಲ್ಲ. ಕೊನೆಗೆ ಸ್ನೇಹಿತರು, ಕುಟುಂಬಿಕರು ತಂಡೋಪತಂಡವಾಗಿ ವಕ್ಕಾಡಿ ಭಾಗದಲ್ಲಿ ಮಧ್ಯರಾತ್ರಿವರೆಗೆ ಹುಡುಕಾಡಿದರು.

ಕುಂದಾಪುರ ತಾಲೂಕಿನ ವಕ್ಕಾಗಿ ಕಾಳಾವರ ರಸ್ತೆ ಸಮೀಪದ ಸರಕಾರಿ ಹಾದಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ರವಿಚಂದ್ರ ಕುಲಾಲ್ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಕುಂದಾಪುರ ಪಿಎಸ್‌ಐ ಭೇಟಿ ನೀಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

- Advertisement -

Related news

error: Content is protected !!