Friday, June 5, 2026
spot_imgspot_img
spot_imgspot_img

ಉಡುಪಿ: ನೆರೆ ನೀರಿನಲ್ಲಿಯೇ ಶವ ಹೊತ್ತುಕೊಂಡು ಹೋಗಿ ಶವ ಸಂಸ್ಕಾರ

- Advertisement -
- Advertisement -

ಕಾವು: ಎಡೆಬಿಡದೆ ಸುರಿಯುತ್ತಿರುವ ಕಾರಣ ತೋಟ, ಮೈದಾನ, ಪಟ್ಟಣಗಳು ಕೃತಕ ನೆರೆಯಿಂದ ತುಂಬಿ ಹೋಗಿದೆ. ಇನ್ನು ಮಳೆಯ ಕಾರಣ ಶವವನ್ನು ನೆರೆ ನೀರಿನಲ್ಲಿಯೇ ಹೊತ್ತುಕೊಂಡು ಹೋಗಿ ಶವ ಸಂಸ್ಕಾರ ನಡೆಸಿದ ಘಟನೆ ನಡೆದಿದೆ. ಕಾವು ತಾಲೂಕು ಕೋಟೆ ಗ್ರಾ.ಪಂ. ವ್ಯಾಪ್ತಿಯ ಮಟ್ಟು ದೇವರಕುದ್ರು ಎಂಬಲ್ಲಿ ಈ ಘಟನೆ ಸಂಭವಿಸಿದೆ.

ದೇವರಕುದ್ರುಗೆ ಸಂಪರ್ಕ ರಸ್ತೆ ಇದ್ದರೂ ರಸ್ತೆ ತೋಟದಲ್ಲಿ ನೆರೆ ನೀರು ತುಂಬಿದ್ದ ಕಾರಣದಿಂದ ಆ್ಯಂಬುಲೆನ್ಸ್ ಮನೆಯವರೆಗೆ ತಲುಪಲು ಸಾಧ್ಯವಾಗಿಲ್ಲ, ಹಾಗಾಗಿ ಮಟ್ಟು ದೇವರಕುದ್ರು ಬೊಮ್ಮನ್ ತೋಟದ ರಾಮಪ್ಪ ಕುಂದರ್ ಪತ್ನಿ ಬೇಬಿ ಪೂಜಾರಿ ಅವರ ಪಾರ್ಥಿವ ಶರೀರವನ್ನು ಸುಮಾರು ಅರ್ಧ ಕಿ.ಮೀ. ದೂರದವರೆಗೆ ಹೊತ್ತುಕೊಂಡು ಹೋಗಿದ್ದಾರೆ. ಬಳಿಕ ಆ್ಯಂಬುಲೆನ್ಸ್ ಮೂಲಕ ಸಾಗಿಸಿ ಕೋಟೆ ಗ್ರಾ.ಪಂ.ನ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರ ನಡೆಸಲಾಗಿದೆ ಎಂದು ಸ್ಥಳೀಯರಾದ ಲಕ್ಷ್ಮಣ್ ಅಂಚನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!