Monday, June 22, 2026
spot_imgspot_img
spot_imgspot_img

ಪ್ರಧಾನಿ ಮೋದಿ ಮನ್ ಕೀ ಬಾತ್ ವಿಡಿಯೋಗೆ ಲೈಕ್ಸ್ ಗಿಂತ ಜಾಸ್ತಿ ಡಿಸ್ ಲೈಕ್

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಕಾರ್ಯಕ್ರಮಗಳಲ್ಲಿ ಮನ್ ಕೀ ಬಾತ್ ಕೂಡ ಒಂದು.ತಿಂಗಳಾಂತ್ಯದ ಭಾನುವಾರ ನಡೆಸುವ ಈ ರೇಡಿಯೋ ಕಾರ್ಯಕ್ರಮವನ್ನು ಕೇಳಲು ಜನ ಕಾಯುತ್ತಿರುತ್ತಾರೆ. ಆದ್ರೆ ನಿನ್ನೆ ಪ್ರಸಾರವಾದ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಲೈಕ್ಸ್ ಗಿಂತಲೂ ಜಾಸ್ತಿ ಡಿಸ್ ಲೈಕ್ ಬಂದಿದೆ.

ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜೆಇಇ ಮತ್ತು ನೀಟ್ ಪರೀಕ್ಷೆ ಮುಂದೂಡುವಂತೆ ಕೆಲ ವಿದ್ಯಾರ್ಥಿ ಸಂಘಟನೆಗಳಿಂದ ಒತ್ತಾಯ ಕೇಳಿಬಂದಿತ್ತು. ಆದರೂ ಪ್ರಧಾನಿ ಮೋದಿ ಮನ್ ಕೀ ಬಾತ್ ನಲ್ಲಿ ಈ ಬಗ್ಗೆ ಮಾತನಾಡಿಲ್ಲ ಎಂಬುದು ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ವಿರೋಧ ಪಕ್ಷಗಳು ಕೂಡ ವಾಗ್ದಾಳಿ ನಡೆಸಿವೆ.

ನಿನ್ನೆ ಮನ್ ಕೀ ಬಾತ್ ಆರಂಭಕ್ಕೂ ಮೊದಲು ಹಾಗೂ ನಂತರ ಮನ್ ಕೀ ನಹೀ..ಸ್ಟೂಡೆಂಟ್ ಕೀ ಬಾತ್ ಅನ್ನೋ ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಡಿಂಗ್ ಆಗಿತ್ತು. ಇದಾದ ಬಳಿಕ ಯೂಟ್ಯೂಬ್ ವಿಡಿಯೋವನ್ನು ಡಿಸ್ ಲೈಕ್ ಮಾಡುವ ಮೂಲಕ ಪ್ರತಿಭಟಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಹೆಸರಿನ ಯೂಟ್ಯೂಬ್ ಚಾನಲ್ ನಲ್ಲಿ ಲೈವ್ ಸ್ಟ್ರೀಮ್ ಆದ ವಿಡಿಯೋಗೆ 31 ಸಾವಿರ ಲೈಕ್ಸ್ ಇದ್ದರೆ 77 ಸಾವಿರ ಡಿಸ್ ಲೈಕ್ ಇದೆ

- Advertisement -

Related news

error: Content is protected !!