Wednesday, June 17, 2026
spot_imgspot_img
spot_imgspot_img

ಉಡುಪಿ: ಮೂಳೂರು ಕಡಲ ತೀರದಲ್ಲಿ ತೊರಕೆ ಮೀನಿನ ರಾಶಿ

- Advertisement -
- Advertisement -

ಉಡುಪಿ: ಕಾಪು ತಾಲೂಕಿನ ಮೂಳೂರು ಕಡಲ ತೀರದಲ್ಲಿ ದೊಡ್ಡ ಗಾತ್ರದ ನೂರಾರು ತೊರಕೆ ಮೀನುಗಳು ಮೀನುಗಾರರ ಬಲೆಗೆ ಬಿದ್ದಿವೆ. ಬಲೆಗೆ ಬಿದ್ದ ಮೀನು ಕಂಡು ಮೀನುಗಾರರು ಸಂಭ್ರಮಿಸಿದ್ದಾರೆ.

ದೊಡ್ದ ದೊಡ್ಡ ಗಾತ್ರದ ನೂರಾರು ತೊರಕೆ ಮೀನುಗಳು ಮೀನುಗಾರರ ಬಲೆಗೆ ಬಿದ್ದು ಮೀನುಗಾರರಿಗೆ ಸುಗ್ಗಿಯಂತಾಗಿದೆ. ಬಲೆಗೆ ಬಿದ್ದ 50 ಕೆಜೆ ಯಷ್ಟು ತೂಕದ ನೂರಾರು ತೊರಕೆ ಮೀನುಗಳನ್ನು ನೋಡಲು ಸೇರಿದ ನೂರಾರು ಮಂದಿ ಸೇರಿದ್ದಾರೆ.

ಅಧಿಕ ತೂಕದ ಮೀನುಗಳನ್ನು ದೊಡ್ಡ ಬಡಿಗೆಯಲ್ಲಿ ಕಟ್ಟಿ ಮೀನುಗಾರರು ಮೇಲೆ ಸಾಗಿಸಿದ್ದಾರೆ. ಈ ಮೀನುಗಳಿಗೆ ಕೆಜಿಗೆ 250 ರಿಂದ 300 ರೂಪಾಯಿದ್ದು ಬಹಳಷ್ಟು ಬೇಡಿಕೆ ಇದೆ.ಇತ್ತೀಚಿನ ಕಡಲಿನಲ್ಲಿ ಹೇರಳವಾಗಿ ವಿವಿಧ ಮೀನುಗಳು ಸಿಗುತ್ತಿದ್ದು ಮೀನುಗಾರರಿಗೆ ಸಂತಸ ತಂದಿದೆ.

astr
- Advertisement -

Related news

error: Content is protected !!