Tuesday, November 10, 2026
spot_imgspot_img
spot_imgspot_img

ಪುಣಚ : ರಾಜ್ಯಮಟ್ಟದ ದಫ್ ಸ್ಪರ್ಧೆ, ದಫ್ ರಾತೀಬ್ ಹಾಗೂ ಧಾರ್ಮಿಕ ಪ್ರವಚನ, ಪೊಳಿಪು – ಕಾಪು ತಂಡಕ್ಕೆ ದಫ್ ಪ್ರಶಸ್ತಿ

- Advertisement -
- Advertisement -

ವಿಟ್ಲ : ಪುಣಚ – ಪರಿಯಾಲ್ತಡ್ಕದ ರಿಫಾಯಿ ದಫ್ ಕಮಿಟಿ ಇದರ 54ನೇ ವಾರ್ಷಿಕ ಹಾಗೂ ಬದ್ರಿಯಾ ಯಂಗ್ ಬಾಯ್ಸ್ ಇದರ 25 ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ಧೆ, ಧಾರ್ಮಿಕ ಪ್ರವಚನ ಹಾಗೂ ದಫ್ ರಾತೀಬು ಇಲ್ಲಿನ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಯಾಲ್ತಡ್ಕ ಜುಮಾ ಮಸೀದಿ ಅಧ್ಯಕ್ಷ ಎಂ.ಎಸ್.ಮಹಮ್ಮದ್ ಮಾತನಾಡಿ ಇಸ್ಲಾಮಿನ ಸಾಂಸ್ಕೃತಿಕ ಕಲೆಯಾದ ದಫ್ ಕಲೆಯಲ್ಲಿ ಶಾಂತಿ, ಸೌಹಾರ್ದತೆ, ಸಾಮರಸ್ಯ , ಮಾನವೀಯ ಸಂದೇಶವನ್ನು ಸಾರುವ ಮೂಲಕ ಇಂದು ದೇಶದಾದ್ಯಂತ ಸರ್ವ ಧರ್ಮೀಯರ ಮೆಚ್ಚುಗೆಗೆ ಪಾತ್ರವಾಗುತ್ತಿದೆ ಎಂದರು .

ಸ್ಥಳೀಯ ಮಸೀದಿ ಖತೀಬ್ ಹಸೈನಾರ್ ಫೈಝಿ ಉದ್ಘಾಟಿಸಿದರು. ಕಮಾಲ್ ಆಂಡ್ ಕಂಪೆನಿ ಅಡ್ವಕೇಟ್ಸ್ ಪಾನ್ ಇಂಡಿಯಾದ ಸ್ಥಾಪಕ ಕಮಾಲ್, ಸೌದಿ ಅರೇಬಿಯಾದ ರೆಲ್ಕೋ ಚೆಯರ್ಮೇನ್ ಬಶೀರ್ ಸಂಪ್ಯ, ಯೂಸುಫ್ ಗೌಸಿಯಾ, ಎಸ್ಡಿಪಿಐ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಪುತ್ತೂರು ಪುರಸಭಾ ಸದಸ್ಯ ರಿಯಾಝ್ ಪರ್ಲಡ್ಕ, ಎ.ಪಿ.ಎನ್ ವೆಲ್ಫೇರ್ ಅಸೋಸಿಯೇಷನ್ ಯು.ಎ.ಇ ಇದರ ಅಧ್ಯಕ್ಷ ಅಬೂಬಕ್ಕರ್ ಅಜ್ಜಿನಡ್ಕ, ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಅಸೋಸಿಯೇಷನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ ಅತಿಥಿಗಳಾಗಿ ಭಾಗವಹಿಸಿದ್ದರು.

ರಿಫಾಯಿ ದಫ್ ಕಮಿಟಿ ಅಧ್ಯಕ್ಷ ಕಮರುದ್ದೀನ್ ಅವರ ಅಧ್ಯಕ್ಷತೆ ಯಲ್ಲಿ, ಅಕ್ಕರಂಗಡಿ ಮಸೀದಿ ಖತೀಬ್ ಝುಬೈರ್ ದಾರಿಮಿ ನೇತೃತ್ವದಲ್ಲಿ ದಫ್ ರಾತೀಬು, ಕೇರಳ – ಕೊಲ್ಲಂ ನ ಶಫೀಕ್ ಬದ್ರಿ ಅಲ್ ಬಾಖವಿ ಮತ್ತು ಕೊಡಗು ಅಯ್ಯಂಗೇರಿಯ ರಾಫೀ ಹಿಮಮಿ ಖಾಮಿಲ್ ಸಖಾಫಿ ಇವರಿಂದ ಧಾರ್ಮಿಕ ಪ್ರವಚನ ಹಾಗೂ ಮೌಲೀದ್ ಪಾರಾಯಣ ನಡೆಯಿತು.

ಬದ್ರಿಯಾ ಯಂಗ್ ಬಾಯ್ಸ್ ಅಧ್ಯಕ್ಷ ಉಮ್ಮರ್ ಫಾರೂಕ್, ಪರಿಯಾಲ್ತಡ್ಕ ಎಂಜೆಎಂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್, ಅಬ್ದುಲ್ಲಾ ಹಾಜಿ, ಅಬೂಬಕ್ಕರ್ ಸಿದ್ದೀಕ್ ರಝ್ವಿ ಅಲ್ ಫುರ್ಖಾನಿ, ಸಯ್ಯಿದ್ ಸುಹೈಲ್ ಸುರೈಜಿ ಅಲ್ ಫಾಲಿಲಿ , ಮುಹಮ್ಮದ್ ನಿಝಾರ್ ಫೈಝಿ ಅಲ್ ಮಹ್ ಬರಿ, ಪುಣಚ ಮಸೀದಿ ಖತೀಬ್ ಮುಹಮ್ಮದ್ ದಾರಿಮಿ, ಸುಫ್ಯಾನ್ ಮದನಿ ಅಜ್ಜಿನಡ್ಕ, . ಅಬ್ದುಲ್ ಸಲಾಂ ಫೈಝಿ ಮಹ್ ಬರಿ ನೀರ್ಕಜೆ, . ಯೂಸುಫ್ ಮಿಸ್ಬಾಹಿ ಪರಿಯಾಲ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.

13 ತಂಡಗಳು ಭಾಗವಹಿಸಿದ್ದ ಈ ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಕಾಪು – ಪೊಳಿಪುವಿನ ಸಯ್ಯಿದ್ ಸಂಶುದ್ದೀನ್ ದಫ್ ತಂಡ ಪ್ರಥಮ, ದೇರಳಕಟ್ಟೆ – ರೆಂಜಾಡಿಯ ತಾಜುಲ್ ಹುದಾ ದಫ್ ತಂಡ ದ್ವಿತೀಯ ಹಾಗೂ ಉಳ್ಳಾಲದ ಅಲ್ ಜಝೀರಾ ದಫ್ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಪೊಳಿಪು ಹಾಗೂ ರೆಂಜಾಡಿ ತಂಡವು ಉತ್ತಮ ಹಾಡುಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು.

ಸ್ವಾಗತ ಸಮಿತಿ ಅಧ್ಯಕ್ಷ ಮುಸ್ತಫಾ ಫೈಸಾರಿ ಸ್ವಾಗತಿಸಿ, ಹಾಶಿರ್ ನಝೀರ್ ಸಖಾಫಿ ಕಿರಾಅತ್ ಪಠಿಸಿದರು. ಶಾಫಿ ದಾರಿಮಿ ಪರಿಯಾಲ್ತಡ್ಕ ವಂದಿಸಿದರು. ನೌಫಲ್ ಕುಡ್ತಮುಗೇರ್ ಮತ್ತು ಸುಹೈಬ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!