Friday, April 19, 2024
spot_imgspot_img
spot_imgspot_img

ಮನೆಯ ಸಂಪ್​ಗಳಲ್ಲಿ ಮೋಟಾರ್ ಕಳ್ಳತನ: ಆರೋಪಿ‌ಯ ಬಂಧನ!

- Advertisement -G L Acharya panikkar
- Advertisement -

ಮೈಸೂರು : ಮನೆಯ ಸಂಪ್​ಗಳಲ್ಲಿ ಅಳವಡಿಸಿದ್ದ ಮೋಟಾರ್​ಗಳನ್ನು ಕಳ್ಳತನ ಮಾಡುತ್ತಿದ್ದ ‌ಆರೋಪಿಯನ್ನು ಆಲನಹಳ್ಳಿ ಪೊಲೀಸರು ಬಂಧಿಸಿದ್ದು, ಆತನಿಂದ 11 ಮೋಟಾರ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ಮೈಸೂರಿನ ಶಾಂತಿ ನಗರದ ನಿವಾಸಿ ಮೊಹಮ್ಮದ್ ಸಲೀಂ ಎನ್ನಲಾಗಿದ್ದು ಈತನಿಂದ 50 ಸಾವಿರ ಬೆಲೆಯ 11 ಪಂಪುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದ ವಿವಿಧ ಮನೆಗಳ ಸಂಪುಗಳಿಗೆ ಅಳವಡಿಸಿದ್ದ ಮೋಟಾರ್ ಪಂಪುಗಳನ್ನು ಈತ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.ಕಳ್ಳತನ ಕೃತ್ಯಕ್ಕೆ ಸಂಬಂಧಿಸಿ ಆಲನಹಳ್ಳಿ ಪೊಲೀಸ್ ಠಾಣೆಯ 4 ಪ್ರಕರಣಗಳು ಮತ್ತು ನಜರ್‍ಬಾದ್ ಪೊಲೀಸ್ ಠಾಣೆಯ 01 ಪ್ರಕರಣ ಪತ್ತೆಯಾಗಿರುತ್ತವೆ.

- Advertisement -

Related news

error: Content is protected !!