Friday, April 26, 2024
spot_imgspot_img
spot_imgspot_img

ಉಡುಪಿ: ಶಾಲೆಯ ಕೊಳವೆ ಬಾವಿ ದುರಸ್ಥಿ ಕಾರ್ಯಕ್ಕೆ ಅನುದಾನ ಬಿಡುಗಡೆಗೊಳಿಸದೆ ನೀಚ ರಾಜಕೀಯ..!
ನೀರಿನ ತೆರಿಗೆ ಲಕ್ಷಾಂತರ ಸಂಗ್ರಹಿಸಿದರೂ ಅನುದಾನ ಕೊಡಲು ಮೀನ ಮೇಷ ಎಣಿಸುತ್ತಿರುವ ಪಿಡಿಓ..!

- Advertisement -G L Acharya panikkar
- Advertisement -

ಉಡುಪಿ: ಬೈರಂಪಳ್ಳಿ ವಾಪ್ತಿಯ 41ನೇ ಶೀರೂರು ನ್ಯೂ ಕಲ್ಲಾಳ ಕಿರಿಯ ಪ್ರಾಥಮಿಕ ಶಾಲೆಯ ಕೊಳವೆ ಬಾವಿಯ ಬೋರ್‌ವೆಲ್ ನ ಪಂಪು ಫೆಬ್ರವರಿ 17ರಂದು ಹಾಳಾಗಿತ್ತು. ಈ ವೇಳೆ ಶಾಲಾ ಮುಖ್ಯೋಪಾಧ್ಯಾಯರು ಅದನ್ನು ರಿಪೇರಿ ಮಾಡಿಸಲು ಮೆಲೇತ್ತಿದ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಕೊಳವೆ ಬಾವಿಗೆ ಶಿಲೆ ಕಲ್ಲನ್ನು ಹಾಕಿ ಬ್ಲಾಕ್ ಮಾಡಿದಾಗ ನೀರಿನ ಸಮಸ್ಯೆ ಉಂಟಾಗಿತ್ತು. ಅದೇ ಸಮಯದಲ್ಲೇ ವಿಷಪೂರಿತ ಹಾವು ಅದರಲ್ಲಿ ಬಿದ್ದು ಶಾಲಾ ಮಕ್ಕಳು ಕುಡಿಯುವ ನೀರು ಕಲುಷಿತಗೊಂಡಿತ್ತು.

ಕೊಳವೆ ಬಾವಿಯ ರಿಫ್ಲಾಶಿಂಗ್ ಮಾಡಲು ವಿಷಯವನ್ನು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾಡಳಿತ ಉಡುಪಿ ರವರುಗಳ ಗಮನಕ್ಕೆ ತಂದು ಮನವಿ ಮಾಡಿದರು ಯಾವುದೇ ಪ್ರತಿಕ್ರಿಯೆ ಹಾಗು ಅನುದಾನ ಬಂದಿಲ್ಲ. ಹೀಗಾಗಿ ಬೈರಂಪಳ್ಳಿ ಗ್ರಾಂ ಪಂ ಸದಸ್ಯರಾದ ಸಂತೋಷ್ ಕುಮಾರ್ ಬೈರಂಪಳ್ಳಿಯವರು ಸ್ವತಃ ಮುತುವರ್ಜಿ ವಹಿಸಿ ಸಾಮಾನ್ಯ ಸಭೆಯಲ್ಲಿ ಈ ತುರ್ತುಸ್ಥಿತಿಗೆ ಮನವಿಯನ್ನು ಮಾಡಿ ಮಾನ್ಯ ಅಧ್ಯಕ್ಷರ ನಿರ್ಣಯದ ಮೇರೆಗೆ ಪಂಚಾಯತಿ ಸ್ವಂತ ಅನುದಾನ ದಿಂದ ಕೆಲಸ ನಿರ್ವಹಿಸಲು ಸ್ಥಾನಿಯ ಗುತ್ತಿಗೆದಾರನ್ನು ಸಂಪರ್ಕಿಸಿ ಬೋರ್ವೆಲ್ ರಿಫ್ಲಾಶಿಂಗ್ ಮಾಡಿಸಿ ಮತ್ತು ಆರೋಗ್ಯ ಇಲಾಖೆಯಿಂದ ನೀರಿನ ತಪಾಸಣೆ ನಡೆಸಿ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.

ಈ ಕೆಲಸಕ್ಕೆ ಬೈರಂಪಳ್ಳಿ ಪಂಚಾಯತ್‌ನಲ್ಲಿ ನೀರಿನ ಬಿಲ್ ಸಂಗ್ರಹ ಹಾಗೂ ತೆರಿಗೆಯ ಹಣ ಲಕ್ಷಾನುಗಟ್ಟಲೆ ಜಮೆಗೊಂಡು 30000 ವರೆಗಿನ ಹಣ ಪಾವತಿಗೆ ಅವಕಾಶ ಇದ್ದರು, ಅನೇಕ ನೀರು ನೈರ್ಮಲ್ಯ ಕೆಲಸಕ್ಕೆ ಸಾವಿರಗಟ್ಟಲೆ ಪಾವತಿಗೊಂಡರೂ ಈ ಕಾಮಗಾರಿಗೆ ಹಣ ಒದಗಿಸದೇ ಇರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ 5 ತಿಂಗಳಿಂದ ರೂಪಾಯಿ 22500 ನ್ನು ಗುತ್ತಿಗೆದಾರರಿಗೆ ಪಾವತಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕೊಳಕು ರಾಜಕೀಯಕ್ಕೆ ಪೂರಕವಾಗಿ ನೆಪಗಳನೊಡ್ಡಿ ವಿಳಂಬಿಸುತ್ತಿರುದು ಮತ್ತು ಪಾವತಿಸದಿರುದು ಖಂಡನೀಯ ಹಾಗು ಪಂಚಾಯತ್ ರಾಜ್ ಅಧಿಕಾರದ ದುರ್ಬಳಕೆ ಎಂಬ ಆರೋಪ ಕೇಳಿಬಂದಿದೆ.

- Advertisement -

Related news

error: Content is protected !!