Friday, June 5, 2026
spot_imgspot_img
spot_imgspot_img

ಉಡುಪಿ: ಶ್ರೀಕೃಷ್ಣನ ದರ್ಶನಕ್ಕೆ ಬಂದ ಮಹಿಳೆಯ ಪರ್ಸ್ ಕಳವು

- Advertisement -
- Advertisement -

ಉಡುಪಿ: ಶ್ರೀಕೃಷ್ಣನ ದರ್ಶನಕ್ಕೆ ಬಂದ ಮಹಿಳೆಯ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳಿದ್ದ ಪರ್ಸ್‌ನ್ನು ಕಳ್ಳರು ಎಗರಿಸಿದ ಘಟನೆ ನಡೆದಿದೆ.

ಬೆಂಗಳೂರು ರಾಜರಾಜೇಶ್ವರಿ ನಗರದ ಸುಧಾ ಪರಿಮಳ (52) ಅವರು ಪರ್ಸ್ ಕಳೆದುಕೊಂಡವರು. ಸುಧಾ ಅವರು ಕುಟುಂಬದೊಂದಿಗೆ ಶ್ರೀಕೃಷ್ಣ ಮಠಕ್ಕೆ ಬೆಳಗ್ಗೆ ಆಗಮಿಸಿದ್ದು, ದರ್ಶನ ಪಡೆಯಲು ಒಳಗೆ ಹೋಗಿದ್ದರು. ಈ ವೇಳೆ ಅವರ ಕೈಯಲ್ಲಿದ್ದ ಹ್ಯಾಂಡ್‌ಬ್ಯಾಗ್‌ನ ಜಿಬ್‌ನ್ನು ತೆಗೆದು ಅದರಲ್ಲಿದ್ದ ಪರ್ಸ್‌ನ್ನು ಕಳ್ಳರು ಎಗರಿಸಿದ್ದಾರೆ.

ಪರ್ಸ್‌ನಲ್ಲಿ ಚಿನ್ನದ ಕರಿಮಣಿ ಸರ, 4500 ರೂ. ನಗದು, ಎಟಿಎಂ ಕಾರ್ಡ್, ಆಧಾರ್ ಕಾರ್ಡ್‌ಗಳಿದ್ದವು. ಒಟ್ಟು 1,24,500 ರೂ. ಬೆಲೆಬಾಳುವ ವಸ್ತುಗಳು ಪರ್ಸ್‌ನಲ್ಲಿದ್ದವು ಎಂದು ಅಂದಾಜಿಸಲಾಗಿದೆ.

- Advertisement -

Related news

error: Content is protected !!