Friday, May 17, 2024
spot_imgspot_img
spot_imgspot_img

ಉಡುಪಿ: ಹೊಳೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದ ಇಬ್ಬರ ಮೃತದೇಹ ಪತ್ತೆ!

- Advertisement -G L Acharya panikkar
- Advertisement -

ಉಡುಪಿ: ಹೊಳೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದ ಇಬ್ಬರು ಯುವಕರ ಮೃತದೇಹ ಇಂದು ಪತ್ತೆಯಾಗಿದ್ದು, ಮೃತರನ್ನು ಚಾಂತಾರು ನಿವಾಸಿ ಶ್ರೇಯಸ್ (18) ಹಾಗೂ ವಾರಂಬಳ್ಳಿಯ ಸ್ವರ್ಣನಗರ ಅನಾಸ್ (16) ಎನ್ನಲಾಗಿದೆ.

ಬ್ರಹ್ಮಾವರದ ಉಪ್ಪೂರು ಗ್ರಾಮದ ಉಗ್ಗೇಲುಬೆಟ್ಟು ಮಡಿಸಾಲು ಹೊಳೆಯಲ್ಲಿ ಮಂಗಳವಾರದAದು ಮೂವರು ಗೆಳೆಯರು ಸೇರಿ ಈಜಲು ಹೊಳೆಯತ್ತ ತೆರಳಿದ್ದರು. ಈ ಸಂದರ್ಭದಲ್ಲಿ ಇಬ್ಬರು ಯುವಕರು ನೀರು ಪಾಲಾಗಿದ್ದರು, ಆದರೆ ಮತ್ತೊಬ್ಬ ಯುವಕ ಸಂಜಯ್ ರಾಜ್ ಇದನ್ನು ಕಂಡು ಗಾಬರಿಯಾಗಿ ಯಾರಿಗೂ ಮಾಹಿತಿ ನೀಡಿರಲಿಲ್ಲ.

ಈ ಮಧ್ಯೆ ರಾತ್ರಿ ವೇಳೆಗೆ ಶ್ರೇಯಸ್‌ನ ತಂದೆ ಕೆಲಸ ಮುಗಿಸಿ ಮನೆಗೆ ವಾಪಾಸಾದಾಗ ಅವರ ಪತ್ನಿ ಮಗ ಶ್ರೇಯಸ್ ಆಟ ಆಡಲು ಹೋಗುವುದಾಗಿ ಹೇಳಿ ಈವರೆಗೆ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಶ್ರೇಯಸ್‌ನ ಸ್ನೇಹಿತ ಸಂಜಯ್‌ರಾಜ್ ಅವರಲ್ಲಿ ವಿಚಾರಿಸಿದ ಸಂದರ್ಭ ಶ್ರೇಯಸ್ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಆಸುಪಾಸಿನ ಎಲ್ಲಾ ಕಡೆ ವಿಚಾರಿಸಿ ಹುಡುಕಲಾಗಿ ಆದರೆ ಯಾವುದೇ ಮಾಹಿತಿ ತಿಳಿಯಲಿಲ್ಲ. ಎಲ್ಲಾ ಕಡೆ ವಿಚಾರಿಸುತ್ತಿರುವಾಗ ಉಪ್ಪೂರು ಗ್ರಾಮದ ಉಗ್ಗೇಲ್‌ಬೆಟ್ಟು ರೈಲ್ವೇ ಬ್ರಿಜ್‌ನ ಕೆಳಗೆ ಮಡಿಸಾಲು ಹೊಳೆಯಲ್ಲಿರುವ ರೈಲ್ವೇ ಬ್ರಿಜ್‌ನ ಪಿಲ್ಲರ್ ಪುಟ್ಟಿಂಗ್ ಮೇಲೆ ಒಂದು ಬ್ಯಾಗ್, 2 ಜೊತೆ ಚಪ್ಪಲಿ, ಮಿರಿಂಡಾ ಬಾಟಲ್, ರಿಂಗ್ ಆಗುತ್ತಿರುವ ಮೊಬೈಲ್ ಇರುವ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದ ಮನೆಯವರು, ಸ್ಥಳೀಯರು ಅಗ್ನಿಶಾಮಕ ದಳದವರು ನಾಪತ್ತೆಯಾದವರಿಗೆ ಹುಡುಕಾಟ ನಡೆಸಿದ್ದಾರೆ. ಆದರೂ ಇಬ್ಬರು ಬಾಲಕರು ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಹುಡುಕಾಟ ಮುಂದುವರಿಸಿದ ವೇಳೆ ಇಬ್ಬರ ಮೃತದೇಹ ಹೇರೂರು ರೈಲ್ವೆ ಸೇತುವೆ ಬಳಿ ಪತ್ತೆಯಾಗಿದೆ.

- Advertisement -

Related news

error: Content is protected !!