Wednesday, May 1, 2024
spot_imgspot_img
spot_imgspot_img

ಉಪ್ಪಿನಂಗಡಿ: ನಕಲಿ ಐಡಿ ಕಾರ್ಡ್ ಬಳಸಿ ಆಶ್ರಮದ ಹೆಸರಿನಲ್ಲಿ ಭಿಕ್ಷಾಟನೆ..!!

- Advertisement -G L Acharya panikkar
- Advertisement -
vtv vitla

ಉಪ್ಪಿನಂಗಡಿ: ನಕಲಿ ಐಡಿ ಕಾರ್ಡ್ ಬಳಸಿ ಮೈಸೂರಿನ ಆಶ್ರಮಕ್ಕೆಂದು ಹಣ, ಹಳೆ ಬಟ್ಟೆ ಸಂಗ್ರಹಿಸುತ್ತಿದ್ದ ಮರಾಠಿ ಮಾತಾನಾಡುತ್ತಿದ್ದ ಇಬ್ಬರು ಮಹಿಳೆಯರನ್ನು ವಿಚಾರಿಸಿದಾಗ ಅವರ ವಂಚನೆ ಬಯಲಾಗಿ ಸ್ಥಳದಿಂದ ಕಾಲ್ಕಿತ್ತ ಘಟನೆ ಕೆಮ್ಮಾರದಲ್ಲಿ ನಡೆದಿದೆ.

ಕೊಯ್ಲದ ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಅವರ ಮನೆಗೆ ಇಬ್ಬರು ಹೆಂಗಸರು ಬಂದಿದ್ದು, ಮೈಸೂರಿನ ಅಂಗವಿಕಲ ಮತ್ತು ವೃದ್ಧಾಶ್ರಮದ ಪರವಾಗಿ ಬಂದಿದ್ದು, ಅಲ್ಲಿಗೆ ಬಟ್ಟೆ- ಬರೆ, ಹಣವನ್ನು ಸಹಾಯ ನೀಡಿ ಎಂದು ಕೇಳಿದ್ದರು. ಈ ವೇಳೆ ಆ ಹೆಂಗಸರಲ್ಲಿ ಪ್ರದೀಪ್ ಅವರು ಐಡಿ ಕಾರ್ಡ್ ತೋರಿಸುವಂತೆ ಹೇಳಿದ್ದು, ಅವರು ಸಮರ್ಪಕ ಉತ್ತರ ನೀಡಲಿಲ್ಲ.

ಬಳಿಕ ಅವರಲ್ಲಿ ಇದ್ದ ಆಶ್ರಮದ ಮಾಹಿತಿ ಕರಪತ್ರದಲ್ಲಿ ನಮೂದಿಸಲಾಗಿದ್ದ ಆಶ್ರಮದ ಅಧ್ಯಕ್ಷ ಎನ್.ಕೆ.ರಮೇಶ್ ಎಂಬವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ಈ ಮಹಿಳೆಯರು ನಮ್ಮ ಆಶ್ರಮದವರು ಅಲ್ಲ’ ಎಂದು ಹೇಳಿ, ಅವರಲ್ಲಿದ್ದ ಕರ ಪತ್ರ ಹಾಗೂ ಐಡಿ ಕಾರ್ಡ್‌ನ್ನು ವಶಪಡಿಸಿಕೊಳ್ಳಲು ಹೇಳಿದ್ದಾರೆ. ಅವರು ಹೇಳಿದಂತೆ, ಮಹಿಳೆಯರಲ್ಲಿದ್ದ ಐಡಿ ಕಾರ್ಡ್ ಮತ್ತು ಕರಪತ್ರಗಳನ್ನು

ಸಾರ್ವಜನಿಕರು ವಶಪಡಿಸಿಕೊಂಡಿದ್ದ, ಬಳಿಕ ಆ ಮಹಿಳೆಯರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

- Advertisement -

Related news

error: Content is protected !!