Saturday, April 20, 2024
spot_imgspot_img
spot_imgspot_img

ಉಪ್ಪಿನಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನಿಗೆ ಉಗ್ರರ ನಂಟಿನ ಶಂಕೆ; ಪತ್ತೆಯ ಬಳಿಕ ನಿಜಾಂಶ ಬಯಲು

- Advertisement -G L Acharya panikkar
- Advertisement -
driving

ಉಪ್ಪಿನಂಗಡಿ ಮೂಲದ ವ್ಯಕ್ತಿಯೋರ್ವನಿಗೆ ಉಗ್ರರ ನಂಟು ಇದೆ ಎಂಬ ಸುದ್ದಿ ಕೆಲ ದಿನಗಳಿಂದ ಭಾರೀ ಚರ್ಚೆಯಾಗುತ್ತಿದೆ. ನೆಕ್ಕಿಲಾಡಿ ಗ್ರಾಮದ ಮೇದರಬೆಟ್ಟು ಅಪಾರ್ಟ್ ಮೆಂಟ್‌ನಲ್ಲಿ ವಾಸಿಸುತ್ತಿದ್ದ ರಫೀಕ್ ಖಾನ್ ಎಂಬಾತ ಆ. 12 ರಿಂದ ನಾಪತ್ತೆಯಾಗಿದ್ದ. ಈತನಿಗೂ ಉಗ್ರರಿಗೂ ನಂಟು ಇದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ರಫೀಕ್ ಖಾನ್‌ನ ಪತ್ನಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಈ ಪ್ರಕರಣ ಸುಖಾಂತ್ಯ ಕಂಡಿದೆ.

ಫಾತಿಮಾ ಎಂಬಾಕೆ ನೆಕ್ಕಿಲಾಡಿ ಗ್ರಾಮದ ರಾಘವೇಂದ್ರ ಮಠದ ಬಳಿ ಇರುವ ಎ ಟು ಝೆಟ್ ಗ್ಯಾರೇಜ್ ಮಾಲಕ ಮೊಹಮ್ಮದ್ ರಫೀಕ್ ಖಾನ್ ಎಂಬಾತನ ನನ್ನು 2 ನೇ ಮದುವೆಯಾಗಿದ್ದು ಮದುವೆಯಾದ ಬಳಿಕ 34 ನೇ ನೆಕ್ಕಿಲಾಡಿ ಗ್ರಾಮದ ಮೇದರಬೆಟ್ಟು ಅಪಾರ್ಟ್ ಮೆಂಟ್‌ನಲ್ಲಿ ಜೊತೆಯಲ್ಲೇ ವಾಸಿಸುತ್ತಿದ್ದರು. ದಿನಾಂಕ 12.07.2021 ರ 16:00 ಗಂಟೆಗೆ ಮಹಮ್ಮದ್ ರಫೀಕ್ ಖಾನ್ ರವರು ಬೆಂಗಳೂರಿನ ವಾಹನದ ಬಿಡಿಭಾಗಗಳನ್ನು ತರಲು ಹೋಗುತ್ತೆನೆಂದು ಹೇಳಿ ಹೊರಟು ಹೋಗಿದ್ದಾನೆ. ನಂತರ ಆ. 18 ರಂದು ಬೆಂಗಳೂರಿನಿಂದ ಹಿಂದಿರುಗುತ್ತೇ ನೆಂದು ಕರೆ ಮಾಡಿದ ರಫೀಕ್ ಖಾನ್ ನಂತರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ಈಗ ಮತ್ತೆ ರಫೀಕ್ ಖಾನ್ ಸಂಪರ್ಕಕ್ಕೆ ಬಂದಿದ್ದು ಉತ್ತರ ಭಾರತದಲ್ಲಿ ಬಂಧಿತರಾದ ಉಗ್ರಗಾಮಿಗಳೊಂದಿಗೆ ಸಂಪರ್ಕ ಹೊಂದಿರುವ ಸುದ್ದಿ ಸುಳ್ಳು ಎಂದು ಪೊಲೀಸರು ತಿಳಿಸಿದ್ದಾರೆ. ಸೆ. 22 ರಂದು ರಫೀಕ್ ತನ್ನ ಹೆಂಡತಿ ಫಾತಿಮಾ ರವರಿಗೆ ವಿಡಿಯೋ ಕಾಲ್ ಮುಖೇನ ಮಾತನಾಡಿಸಿದ್ದು ರಫೀಕ್ ಖಾನ್ ಒಂದು ತಿಂಗಳ ಬಳಿಕ ತನ್ನ ಮನೆಗೆ ಬರುವುದಾಗಿ ತಿಳಿಸಿರುವುದರಿಂದ ಪ್ರಕರಣವನ್ನು ಪತ್ತೆಯಾದ ಪ್ರಕರಣವೆಂದು ಪರಿಗಣಿಸಿ ಮುಕ್ತಾಯ ಮಾಡಲಾಗಿದೆ.

- Advertisement -

Related news

error: Content is protected !!