Tuesday, June 16, 2026
spot_imgspot_img
spot_imgspot_img

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಿತ್ತೂರು: ಶಾಲಾ ಮಕ್ಕಳಿಗೆ ಎಸ್ ಎಲ್ ವಿ ಗ್ರೂಪ್ ವತಿಯಿಂದ ಉಚಿತ ನೋಟ್ ಪುಸ್ತಕ ವಿತರಣೆ

- Advertisement -
- Advertisement -

ಮಿತ್ತೂರು: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಿತ್ತೂರು ಇಲ್ಲಿಯ 168 ಮಕ್ಕಳಿಗೆ ಶ್ರೀ ದಿವಾಕರ್ ದಾಸ್ ನೇರ್ಲಾಜೆ , ಮಾಲಕರು ,ಎಸ್ ಎಲ್ ವಿ ಗ್ರೂಪ್ ಆಫ್ ಇಂಡಿಯಾ ವತಿಯಿಂದ ಉಚಿತವಾಗಿ ನೋಟ್ ಪುಸ್ತಕ ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ SDMC ಅಧ್ಯಕ್ಷರಾದ ಶ್ರೀ ಸುಧೀರ್ ಕುಮಾರ್ ಶೆಟ್ಟಿ ಅವರು ಮಾತನಾಡಿ ಶ್ರೀ ದಿವಾಕರ್ ದಾಸ್ ನೇರ್ಲಾಜೆ ಅವರ ಸಾಮಾಜಿಕ ಬದ್ಧತೆಯನ್ನು ಕೊಂಡಾಡಿದರು. ಪಂಚಾಯತ್ ಸದಸ್ಯರಾದ ರಮೇಶ್ ಪೂಜಾರಿಯವರು ಶಾಲೆಯ ಕಾರ್ಯ ವೈಖರಿಯನ್ನು ಮೆಚ್ಚಿ ಸಹಕಾರವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಸಂಜೀವ ಪೂಜಾರಿ, ಸದಸ್ಯರಾದ ಸೌಮ್ಯ, ಯಶೋಧ ,ಮುಖ್ಯ ಗುರುಗಳಾದ ಸರೋಜಾ ಎ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.ಕುಮಾರಿ ನೇಹಾ ಸ್ವಾಗತಿಸಿ ,ಕುಮಾರಿ ರಚನಾ ವಂದಿಸಿದರು. ಕುಮಾರಿ ಯಶಿಕಾ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!