Thursday, April 25, 2024
spot_imgspot_img
spot_imgspot_img

ಉಪ್ಪಿನಂಗಡಿ: ಮಹಿಳೆಗೆ ವಂಚಿಸಿ ಭೂಕಬಳಿಕೆ ಪ್ರಕರಣ; ಬೆಳ್ತಂಗಡಿ ತಹಶೀಲ್ದಾರ್‌ ಸೇರಿದಂತೆ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲು

- Advertisement -G L Acharya panikkar
- Advertisement -

ಉಪ್ಪಿನಂಗಡಿ: ವಂಚನೆ ಮಾಡಿ ಭೂ ಕಬಳಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ನೋಂದಣಾಧಿಕಾರಿ, ವಕೀಲರೊಬ್ಬರ ಸಹಿತ 7ಮಂದಿ ವಿರುದ್ಧಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರಾಯ ಗ್ರಾಮದ ಕೆರೆಕೋಡಿ ನಿವಾಸಿ ನಾರಾಯಣ ನಾಯ್ಕ ಎಂಬವರ ಪತ್ನಿ ವಾರಿಜಾ ಎಂಬವರು ಈ ದೂರು ನೀಡಿದ್ದು, ವಕೀಲರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಬೆಳ್ತಂಗಡಿ ತಹಶೀಲ್ದಾರರು, ಕರಾಯ ಧನಲಕ್ಷ್ಮೀ ನಿಲಯದ ಗಿರೀಶ, ಸುರೇಶ, ಶೇಖರ ಹಾಗೂ ತಣ್ಣೀರುಪಂಥ ಗ್ರಾಮದ ನಝೀರ್, ಬೆಳ್ತಂಗಡಿಯ ನೋಂದಣಾಧಿಕಾರಿ ನಾಗರಾಜ್ ಎಂಬವರು ತನಗೆ ವಂಚಿಸಿ, ತನ್ನ ಭೂಮಿ ಕಬಳಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ತಂದೆ ಹಾಗೂ ತಾಯಿ ಮೃತಪಟ್ಟ ಬಳಿಕ ತಂದೆಗೆ ಮಂಜೂರಾದ ಜಮೀನನ್ನು ವಿಭಜನೆ ಮಾಡಿಕೊಡಬೇಕೆಂದು ಬೆಳ್ತಂಗಡಿ ಸಿವಿಲ್ ನ್ಯಾಯಾಲಯದಲ್ಲಿ ಮೂಲ ದಾವೆ ನಂ: 156/2016ರಂತೆ ದಾವೆ ಹೂಡಿ ಮಧ್ಯಂತರ ನಿರ್ಬಂಧಾಜ್ಞೆಯನ್ನು ನ್ಯಾಯಾಲಯದ ಮೂಲಕ ಪಡೆದಿದ್ದೇನೆ.

ಇಲ್ಲಿ ಆರೋಪಿಯಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರು ಸುರೇಶ್ ಅವರ ಪಹಣಿ ವ್ಯತ್ಯಾಸವಾಗಿದೆ ಎಂದು ನಂಬಿಸಿ, ಬೆಳ್ತಂಗಡಿ ನೋಂದಣಿ ಕಚೇರಿಯಲ್ಲಿ ಆರೋಪಿ ನಝೀರ್ ಅವರ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ.

ಆರೋಪಿಗಳಾದ ಸುರೇಶ್, ಗಿರೀಶ್ ಹಾಗೂ ಶೇಖರ ಎಂಬವರು ಜಮೀನು ಖರೀದಿಸುವ ನಾಟಕ ಮಾಡಿದ್ದು, ಇದಕ್ಕೆ ಸುಬ್ರಹ್ಮಣ್ಯ ಕುಮಾರ್ ಅಗರ್ತ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ತಹಸೀಲ್ದಾರ್ ಎ ಆರ್ವೈ 9/74-75ಯನ್ನು ಪಹಣಿಯಲ್ಲಿ ತಿರುಚಿ ಎಲ್ಆರ್ವೈ 12/74-75ರಂತೆ ಸುಳ್ಳು ದಾಖಲೆ ಮಾಡಿಕೊಟ್ಟು ಸಹಕರಿಸಿದ್ದಾರೆ. ಈ ಎಲ್ಲ ದಾಖಲೆಗಳನ್ನು ಪರಿಶೀಲಿಸದೇ ನೋಂದಣಾಧಿಕಾರಿಯಾಗಿರುವ ನಾಗರಾಜ್ ಜಾಗ ನೋಂದಣಿ ಮಾಡಿ ಸಹಕರಿಸಿದ್ದಾರೆ ಎಂದು ವಾರಿಜಾ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!