Friday, April 19, 2024
spot_imgspot_img
spot_imgspot_img

ಉಪ್ಪಿನಂಗಡಿ: ಮೀನಿನ ಅಂಗಡಿಯ ದ್ವಂಸ ಪ್ರಕರಣ; ಆರೋಪಿಗಳನ್ನು ಬಂಧಿಸುವಂತೆ ಹಿಂ.ಜಾ.ವೇ. ವತಿಯಿಂದ ಬೃಹತ್ ರಸ್ತೆ ರೋಕ್ ಪ್ರತಿಭಟನೆ

- Advertisement -G L Acharya panikkar
- Advertisement -

ಉಪ್ಪಿನಂಗಡಿ: ಮೀನು ವ್ಯಾಪಾರ ನಡೆಸುತ್ತಿದ್ದ ಹಿಂದೂ ಯುವಕನ ಅಂಗಡಿಗೆ ಆ.22ರ ತಡರಾತ್ರಿ ಹಳೇಗೇಟು ಬಳಿ ಕಿಡಿಗೇಡಿಗಳು ಬೆಂಕಿ ಹಾಕಿ ಸುಟ್ಟಿರುವ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸದಿದ್ದಲ್ಲಿ ರಸ್ತೆ ರೋಕೋ ಪ್ರತಿಭಟನೆ ನಡೆಸುವುದಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೋಮವಾರ ಕರೆಕೊಟ್ಟಿದ್ದರು.

ಈ ಹಿನ್ನೆಲೆ ಇಂದು ಉಪ್ಪಿನಂಗಡಿಯಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಕಾರ್ಯಕರ್ತರು ಒಟ್ಟುಗೂಡಿಕೊಂಡು ಹಳೆಗೇಟು ಬಳಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆ ನಡೆಸಿ ‘ರಸ್ತೆ ರೋಕೋ’ ಪ್ರತಿಭಟನೆಯನ್ನು ನಡೆಸಿದ್ದಾರೆ.

ಪೊಲೀಸ್ ಇಲಾಖೆಯ ಮನವಿ ಮೇರೆಗೆ ಆರೋಪಿಗಳನ್ನು ಬಂಧಿಸಲು ಗುರುವಾರದವರೆಗೆ ಗಡುವು
ನೀಡಲಾಗಿದ್ದು, ಗುರುವಾರ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಶುಕ್ರವಾರ ಉಪ್ಪಿನಂಗಡಿ ಬಂದ್ ಗೆ ನಿರ್ಧಾರ ಮಾಡಿರುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ.

ಈ ಪ್ರತಿಭಟನೆಯ ಸಂದರ್ಭದಲ್ಲಿ ಉಪ್ಪಿನಂಗಡಿ ಪೊಲೀಸರು ಬಂದೋ ಬಸ್ತ್ ಕಲ್ಪಿಸಿದ್ದರು. ಹಿಂದೂ ಜಾಗರಣಾ ವೇದಿಕೆಯ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಜಗದೀಶ್ ನೆತ್ತರ್‌ಕೆರೆ, ಪ್ರಶಾಂತ್ ಬಂಟ್ವಾಳ, ಮಲ್ಲೇಶ್ ಆಲಂಕಾರು, ರವೀಂದ್ರದಾಸ್ ಕುಂತೂರು, ಯು.ರಾಮ, ಪ್ರತಾಪ್ ಪೆರಿಯಡ್ಕ, ಸಂದೀಪ್ ಕುಪ್ಪೆಟ್ಟಿ, ಚಿದಾನಂದ ಪಂಚೇರ್, ರವಿ ತೆಕ್ಕಾರ್, ಸುಜೀತ್ ಬೊಳ್ಳಾವು, ರಂಜಿತ್ ಅಡೆಕ್ಕಲ್, ರಕ್ಷಿತ್ ಪೆರಿಯಡ್ಕ, ಅನಿಲ್ ಹಿರೇಬಂಡಾಡಿ, ಧನ್ಯರಾಜ್ ಬೊಳ್ಳಾರ್, ಸುನೀಲ್ ಬೊಳ್ಳಾರ್, ಪ್ರದೀಪ್ ಅಡೆಕ್ಕಲ್, ಸಂತೋಷ್ ಅಡೆಕ್ಕಲ್, ಜಿತೇಶ್ ಕಜೆಕ್ಕಾರ್, ಪವೀತ್ ಸುರ್ಯ, ನಿತೀನ್ ಅಣ್ಣಾಜೆ ಮತ್ತಿತರರು ಈ ಪ್ರತಿಭಟನೆಯ ವೇಳೆ ಉಪಸ್ಥಿತರಿದ್ದರು.

- Advertisement -

Related news

error: Content is protected !!