Monday, April 29, 2024
spot_imgspot_img
spot_imgspot_img

ಉಪ್ಪಿನಂಗಡಿ: ಮೀನು ಹಿಡಿಯಲು ಹೋಗಿ ನೀರುಪಾಲಾದ ವ್ಯಕ್ತಿಯ ಮೃತದೇಹ ಪತ್ತೆ

- Advertisement -G L Acharya panikkar
- Advertisement -

ಉಪ್ಪಿನಂಗಡಿ: ಮೀನು ಹಿಡಿಯಲೆಂದು ಹೋದ ವ್ಯಕ್ತಿಯೋರ್ವರು ನೇತ್ರಾವತಿ ನದಿಯಲ್ಲಿ ನೀರು ಪಾಲಾದ ಘಟನೆ ಮುಗೇರಡ್ಕದಲ್ಲಿ ಡಿ.26 ರಂದು ಸಂಜೆ ನಡೆದಿದ್ದು, ಮೃತದೇಹವು ಇಂದು ಪತ್ತೆಯಾಗಿದೆ.

ಮೊಗ್ರು ಗ್ರಾಮದ ದಂಡುಗ ನಿವಾಸಿ ಗುಮ್ಮಣ್ಣ ಗೌಡರ ವಿವಾಹಿತ ಪುತ್ರ ಜನಾರ್ದನ (40) ನೀರುಪಾಲಾದ ವ್ಯಕ್ತಿ.

ಘಟನೆಯ ವಿವರ:

ಜನಾರ್ದನ ಹಾಗೂ ಮೊಗ್ರು ಗ್ರಾಮದ ಬೋಲೋಡಿ ನಿವಾಸಿ ಮಹೇಶ್ ಎಂಬವರು ಮುಗೇರಡ್ಕದ ಕಾಮಗಾರಿ ಹಂತದಲ್ಲಿರುವ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಬಲೆ ಹಾಕಲು ಬಂದಿದ್ದರು. ಆ ಸಂದರ್ಭ ಜನಾರ್ದನ ಅವರು ನೀರು ಪಾಲಾಗಿದ್ದಾರೆ. ಆದರೆ ಇವರ ಜೊತೆಗಿದ್ದ ಮಹೇಶ್ ಈ ಸಂದರ್ಭ ಯಾರ ಸಹಾಯಕ್ಕೂ ಕೂಗದೇ ಅವರನ್ನು ಬಿಟ್ಟು ತನ್ನ ಪಾಡಿಗೆ ವಾಪಸ್‌ ಬಂದಿದ್ದರು.

ಹಾಗೆ ಬಂದ ಮಹೇಶ್ ಪದ್ಮುಂ‍ಜ ಬಾರಿಗೆ ತೆರಳಿದ್ದು , ಅಲ್ಲಿ ನಶೆ ಏರಿದ ಬಳಿಕ ಅಲ್ಲಿದ್ದವರಲ್ಲಿ ಈ ವಿಷಯ ಬಾಯ್ಬಿಟ್ಟಿದ್ದಾರೆ. ಜನಾರ್ದನ ಅವರು ನದಿಯಲ್ಲಿ ಮುಳುಗಿದ್ದು, ನಾಳೆ ಅವರ ಮೃತದೇಹ ಹೊರಗೆ ಬರಬಹುದು ಎಂದಿದ್ದರು.ಆಮೇಲೆ ವಿಷಯ ಗೊತ್ತಾಗಿ ಅವರ ಹುಡುಕಾಟ ಆರಂಭವಾಗಿದೆ. ಪುತ್ತೂರು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದ್ದಾರೆ.

ನದಿಯಲ್ಲಿ ನೀರುಪಾಲಾದ ವಿಷಯ ಗೊತ್ತಿದ್ದರೂ ಯಾರಲ್ಲೂ ತಕ್ಷಣಕ್ಕೆ ವಿಷಯ ತಿಳಿಸದೇ ರಾತ್ರಿಯ ಸಮಯದಲ್ಲಿ ಹೇಳಿದ ಮಹೇಶ್‌ಗೆ ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಧರ್ಮದೇಟು ಬಿದ್ದಿದೆ ಎಂದು ವರದಿಯಾಗಿದೆ.

ಸ್ಥ ಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಭೇಟಿ ನೀಡಿದ್ದು , ಸ್ಥ ಳೀಯರಲ್ಲಿ ಮತ್ತು ಅಧಿಕಾರಿಗಳಲ್ಲಿ ಮಾಹಿತಿ ಪಡೆದುಕೊಂಡರು ಎಂದು ವರದಿಯಾಗಿದೆ.

- Advertisement -

Related news

error: Content is protected !!