Friday, March 29, 2024
spot_imgspot_img
spot_imgspot_img

ಉಳಿದ ಚಹಾ ಪುಡಿಯಿಂದ ಸೌಂದರ್ಯ ಹೆಚ್ಚಿಸಬಹುದು

- Advertisement -G L Acharya panikkar
- Advertisement -

ಸಾಮಾನ್ಯವಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಚಹಾ ಮಾಡಿದ ನಂತರ ಚಹಾ ಎಲೆಗಳನ್ನು ಎಸೆಯುತ್ತೇವೆ. ಇನ್ನೂ ಕೆಲವರು ಗಿಡಗಳಿಗೆ ಗೊಬ್ಬರಗಳಾಗಿ ಬಳಸುತ್ತಾರೆ. ಆದರೆ ಈ ಉಳಿದ ಚಹಾ ಎಲೆಯನ್ನು ತ್ವಚೆಯ ಆರೈಕೆಯಲ್ಲಿಯೂ ಬಳಸಬಹುದು ಎಂಬುವುದು ನಿಮಗೆ ಗೊತ್ತಾ?

ನೀವು ಟೀ ಬ್ಯಾಗ್‌ಗಳನ್ನು ಕಣ್ಣಿನ ಕಪ್ಪು ವರ್ತುಲ ನಿವಾರಿಸಲು ಇಡುವುದರ ಬಗ್ಗೆ ಕೇಳಿರಬಹುದು. ಆದರೆ ನಾವಿಂದು ಚಹಾ ಮಾಡಿ ಉಳಿದ ಎಲೆಗಳ ಬಗ್ಗೆ ತಿಳಿಸಲಿದ್ದೇವೆ. ಉಳಿದ ಚಹಾ ಎಲೆಗಳನ್ನು ಬಳಸಿ, ನೀವು ಮುಖ, ಮೊಣಕೈವರೆಗೆ ಚರ್ಮದ ಆರೈಕೆಗಳಲ್ಲಿ ಬಳಸಬಹುದು. ಬಳಸಿದ ಚಹಾ ಪೌಡರ್‌ಗಳನ್ನು ಬಳಸುವುದು ಹೇಗೆ ಅನ್ನೋದನ್ನು ನೋಡೋಣ?

​ಸ್ಕ್ರಬರ್ ಆಗಿ ಬಳಸಿ

ಬಳಸಿದ ಟೀ ಪೌಡರ್‌ನ್ನು ತೆಗೆದುಕೊಂಡು ಸರಿಯಾಗಿ ಒಣಗಲು ಬಿಡಿ. ಒಣಗಿದ ನಂತರ ಅದನ್ನು ಸ್ಕ್ರಬರ್‌ನಂತೆ ಬಳಸಬಹುದು. ನಂತರ ಮುಖವನ್ನು ತೊಳೆದು ಮಾಯಿಶ್ಚರೈಸ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಚರ್ಮವು ಕೋಮಲವಾಗಿರುತ್ತದೆ. ಚಹಾ ಪೌಡರ್‌ಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ನಿಮ್ಮ ಚರ್ಮಕ್ಕೆ ಪರಿಪೂರ್ಣ ಹೊಳಪನ್ನು ನೀಡುತ್ತದೆ.

​ಕಣ್ಣಿನ ಊತವನ್ನು ಕಡಿಮೆ ಮಾಡುತ್ತದೆ

ಕಣ್ಣುಗಳನ್ನು ನಿವಾರಿಸುತ್ತದೆ ಮತ್ತು ಡಾರ್ಕ್ ಸರ್ಕಲ್‌ಗಳನ್ನು ತೆಗೆದುಹಾಕುತ್ತದೆ ಚಹಾದಲ್ಲಿರುವ ಕೆಫೀನ್ ಅಂಶವು ಚರ್ಮದ ಕೆಳಗಿರುವ ರಕ್ತನಾಳಗಳನ್ನು ಕುಗ್ಗಿಸಲು ಮತ್ತು ಕಣ್ಣಿನ ಸುತ್ತಲಿನ ಕಪ್ಪು ವಲಯಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವು ಎರಡು ಟೀ ಬ್ಯಾಗ್‌ಗಳನ್ನು ಒದ್ದೆ ಮಾಡಿ ಮತ್ತು ಅವುಗಳನ್ನು ನಿಮ್ಮ ಕಣ್ಣುಗಳ ಮೇಲೆ ಇರಿಸಿ. ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಇರಿಸಿ. ಹೀಗೆ ನಿಯಮಿತವಾಗಿ ಮಾಡುವುದರಿಂಮದ ಕಣ್ಣಿನ ಕಪ್ಪು ವರ್ತುಲ ನಿವಾರಣೆಯಾಗುತ್ತದೆ.

​ಮೊಣಕೈಯನ್ನು ಕಪ್ಪು ದೂರವಾಗುವುದು

ನೀವು ನೋಡಿರಬಹುದು ಕೆಲವರ ಮುಖ ಬೆಳ್ಳಗಿದ್ದರೂ, ಮೊಣ ಕೈ ತುಂಬಾ ಕಪ್ಪಾಗಿರುತ್ತದೆ. ಬಳಸಿದ ಚಹಾ ಎಲೆಗಳನ್ನು ಮೊಣಕೈಯ ಕಪ್ಪು ಬಣ್ಣವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಇದಕ್ಕಾಗಿ, ಉಳಿದ ಚಹಾ ಎಲೆಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ. ಈಗ ಅದನ್ನು ಒರಟಾಗಿ ರುಬ್ಬಿಕೊಳ್ಳಿ. ಅದನ್ನು ಒಂದು ಡಬ್ಬದಲ್ಲಿ ಇಟ್ಟುಕೊಳ್ಳಿ. ನಿಮಗೆ ಅಗತ್ಯವಿದ್ದಾಗ ಬಳಸುವಾಗ ಅದಕ್ಕೆ ಸ್ವಲ್ಪ ಅಡಿಗೆ ಸೋಡಾ ಮತ್ತು ನಿಂಬೆ ರಸವನ್ನು ಮಿಕ್ಸ್‌ ಮಾಡಿ ಮತ್ತು ಅದನ್ನು ನಿಮ್ಮ ಮೊಣಕೈಗೆ ಹಚ್ಚಿರಿ. ಹೀಗೆ ನಿಮಮಿತವಾಗಿ ಮಾಡುತ್ತಿದ್ದರೆ ನಿಮ್ಮ ಮೊಣಕೈಗಳ ಕಪ್ಪು ದೂರವಾಗುತ್ತದೆ.

​ಒಡೆದ ತುಟಿಗಳಿಗೆ

ಒಡೆದ ತುಟಿಗಳನ್ನು ಸರಿಪಡಿಸಲು ಟೀ ಬ್ಯಾಗ್‌ನ್ನು ಬಳಸಲಾಗುತ್ತದೆ. ಗ್ರೀನ್‌ ಟೀ ಬ್ಯಾಗ್‌ನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಅದ್ದಿ ಅದನ್ನು ನೀವು ನಿಮ್ಮ ತುಟಿಗಳಿಗೆ ಇಡಿ. ಹೀಗೆ ಮಾಡುವುದರಿಂದ ಕ್ರಮೇಣ ಒಡೆದ ತುಟಿಗಳು ಸರಿಯಾಗುತ್ತವೆ. ಅಷ್ಟೇ ಅಲ್ಲದೆ ತುಡಿಯನ್ನು ಕೋಮಲವಾಗಿಸುತ್ತದೆ.

​ಒಡೆದ ಹಿಮ್ಮಡಿಗಳನ್ನು ಸರಿಪಡಿಸಲು

ಒಡೆದ ಹಿಮ್ಮಡಿಗಳ ಸಮಸ್ಯೆಗೆ ಬಳಸಿರುವ ಟೀ ಪೌಡರ್‌ಗಳನ್ನು ಬಳಸಬಹುದು. ಇದಕ್ಕಾಗಿ, ಬಳಸಿದ ಟೀ ಪೌಡರ್‌ನ್ನು ಚೆನ್ನಾಗಿ ತೊಳೆಯಿರಿ. ಇದರ ನಂತರ, 1 ಟೀಸ್ಪೂನ್ ಓಟ್ಸ್ ಮತ್ತು ಕೆಲವು ಹನಿ ತೆಂಗಿನ ಎಣ್ಣೆಯನ್ನು ಮಿಕ್ಸ್‌ ಮಾಡಿ. ಈಗ ಅದನ್ನು ನಿಮ್ಮ ಒಡೆದ ಹಿಮ್ಮಡಿಗಳಿಗೆ ಹಚ್ಚಿ. ಸ್ವಲ್ಪ ಸಮಯದವರೆಗೆ ಬಿಡಿ. ಇದಾದ ನಂತರ ಪಾದಗಳನ್ನು ಸ್ಕ್ರಬ್‌ನಂತೆ ಉಜ್ಜಿ, ಬೆಚ್ಚಗಿನ ನೀರಿನಿಂದ ತೊಳೆಯಿರಿ.

​ಕೂದಲಿಗೆ ಕ್ಲೆನ್ಸರ್

ಕಪ್ಪು ಚಹಾ ಪುಡಿ ಕೂದಲಿಗೆ ಅದ್ಭುತವಾದ ಕ್ಲೆನ್ಸರ್ ಆಗಿ ಕೆಲಸ ಮಾಡುತ್ತದೆ. ನಿಮ್ಮ ಕೂದಲು ಉದುರುವುದನ್ನು ತಡೆಯಲು, ಸ್ವಲ್ಪ ಕಪ್ಪು ಚಹಾವನ್ನು ಕುದಿಸಿ ಮತ್ತು ಮಿಶ್ರಣವನ್ನು ತಣ್ಣಗಾಗಲು ಬಿಡಿ. ಇದನ್ನು ನಿಮ್ಮ ಕೂದಲಿಗೆ ಸ್ಪ್ರೇ ಮಾಡಿ ಇದರಿಂದ ಅದು ನಿಮ್ಮ ನೆತ್ತಿಯನ್ನು ಸ್ವಚ್ಛಗೊಳಿಸಿ, ನಿಮ್ಮ ಕೂದಲನ್ನು ಕಾಂತಿಯುತವಾಗಿಸುತ್ತದೆ.

​ಚರ್ಮದಿಂದ ಕಲೆಗಳನ್ನು ತೆಗೆದುಹಾಕಲು

ಚರ್ಮದ ಕಲೆಗಳನ್ನು ತೆಗೆದುಹಾಕಲು ನೀವು ಬಳಸಿದ ಚಹಾ ಎಲೆಗಳನ್ನು ಬಳಸಬಹುದು. ಮುಖಕ್ಕೆ ಇದನ್ನು ಬಳಸಲು, ಮೊದಲು ಚಹಾ ಎಲೆಗಳನ್ನು ಎರಡು ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಇದಾದ ನಂತರ ಚಹಾ ಪೌಡರ್‌ಗೆ ಅಕ್ಕಿ ಹಿಟ್ಟು ಮತ್ತು ಟೊಮೆಟೊ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು 20 ನಿಮಿಷಗಳ ನಂತರ ನಿಮ್ಮ ಮುಖವನ್ನು ತೊಳೆಯಿರಿ. ಹೀಗೆ ವಾರಕ್ಕೆರಡು ಬಾರಿಯಾದರೂ ಮಾಡುತ್ತೀರಿ. ಕ್ರಮೇಣ ನಿಮ್ಮ ತ್ವಚೆಯ ಕಲೆಗಳನ್ನು ಕಡಿಮೆ ಮಾಡಬಹುದು.

- Advertisement -

Related news

error: Content is protected !!