
ಉಳ್ಳಾಲದಲ್ಲಿ ಐಸಿಸ್ ಪ್ರೇರಿತ ಭಯೋತ್ಪಾದಕರಿಗೆ ನೆರವು ನೀಡಿದ್ದನ್ನು ಖಂಡಿಸಿ ಆಗಸ್ಟ್ 11 ರಂದು ಉಳ್ಳಾಲದಾದ್ಯಂತ ಪೋಸ್ಟ್ ಕಾರ್ಡ್ ಚಳವಳಿ ನಡೆಸಲಾಗುವುದೆಂದು ವಿಶ್ವ ಹಿಂದೂ ಪರಿಷತ್, ಭಜರಂಗದಳ ಹೇಳಿಕೆ ನೀಡಿದೆ.
ಕರಾವಳಿ ಭಾಗವನ್ನು ಕೇಂದ್ರವಾಗಿಸಿಕೊಂಡು ಭಯೋತ್ಪಾದನೆಯ ಮುಖಾಂತರ ದೇಶ ವಿರೋಧಿ ಚಟುವಟಿಕೆ ನಡೆಸುವ ಹುನ್ನಾರ ನಡೆಸುತ್ತಿರುವುದು ಮೊನ್ನೆ ಉಳ್ಳಾಲದಲ್ಲಿ ಮಾಜಿ ಶಾಸಕ ಇದಿನಬ್ಬನರ ಮೊಮ್ಮಗನನ್ನು NIA ಬಂಧಿಸುವ ಮೂಲಕ ಬಹಿರಂಗವಾಗಿದೆ. ಸಿರಿಯಾ ಮತ್ತು ಕಾಶ್ಮೀರ ಮೂಲದ ಉಗ್ರಗಾಮಿಗಳ ಸಂಘಟನೆಯೊಂದಿಗೆ ಸಂಪರ್ಕವನ್ನು ಇಟ್ಟುಕೊಂಡು ಕರಾವಳಿಯಲ್ಲಿ ಉಗ್ರಗಾಮಿಗಳು ನೆಲೆಯೂರಲು ಪ್ರಯತ್ನಿಸುತ್ತಿರುವುದು ಬಹಳ ಆತಂಕಕಾರಿಯಿದೆ ಎಂದು ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.

ಈಗಾಗಲೇ ಈ ಪ್ರಕರಣದಲ್ಲಿ ಹಿಂದೂ ಸಮಾಜದ ಯುವತಿಯೊಬ್ಬಳು ಇಸ್ಲಾಂಗೆ ಮತಾಂತರವಾಗಿ ದೇಶ ವಿರೋಧಿ ಚಟುವಟಿಕೆಗಳಿಗೆ ಭಾಗವಹಿಸುತ್ತಿರುವ ಅಂಶ ಬೆಳಕಿಗೆ ಬಂದಿದ್ದು ಇದರಿಂದ ಸಮಗ್ರ ಹಿಂದೂ ಸಮಾಜ ಚಿಂತೆಗೀಡಾಗಿದೆ. ಈ ಘಟನೆಯನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಜೊತೆಗೆ NIA ಕಚೇರಿಯನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕೆಂದು ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ. ಈ ಪ್ರಕರಣದಿಂದ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕೆಂಬ ಹಿನ್ನಲೆಯಲ್ಲಿ ಉಳ್ಳಾಲದ ಎಲ್ಲ ಗ್ರಾಮಗಳಲ್ಲಿ ವಾರ್ಡುಗಳಲ್ಲಿ ಪೋಸ್ಟ್ ಕಾರ್ಡ್ ಚಳುವಳಿಯನ್ನು ವಿಶ್ವ ಹಿಂದೂ ಪರಿಷದ್ ಹಮ್ಮಿಕೊಂಡಿದೆ ಎಂದರು.












