Tuesday, June 23, 2026
spot_imgspot_img
spot_imgspot_img

ದೇರಳಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ ಬಸ್!

- Advertisement -
- Advertisement -

ಉಳ್ಳಾಲ: ಚಾಲಕನ ರಕ್ತದೊತ್ತಡ ಕಡಿಮೆಯಾದ ಪರಿಣಾಮ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆ ಹತ್ತಿದ ಘಟನೆ ಮಂಗಳವಾರ ಯೆನೆಪೋಯ ಆಸ್ಪತ್ರೆ ಸಮೀಪ ನಡೆದಿದೆ.

ಮಂಗಳೂರಿನಿಂದ ಮುಡಿಪು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್‌ ಯೆನೆಪೋಯ ಆಸ್ಪತ್ರೆ ಬಳಿ ತಲುಪಿದ ವೇಳೆ ಚಾಲಕ ಜನಾರ್ದನ ಅವರಿಗೆ ಏಕಾಏಕಿ ರಕ್ತದೊತ್ತಡ ಕಡಿಮೆಯಾಗಿ ಅಸ್ವಸ್ಥತೆ ಉಂಟಾಗಿದ್ದು, ಪರಿಣಾಮ ಬಸ್‌ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆ ಹತ್ತಿಸಿದ್ದಾರೆ.

ಈ ವೇಳೆ ಗಂಭೀರ ಸ್ಥಿತಿಯಲ್ಲಿದ್ದ ಚಾಲಕ ಜನಾರ್ದನ ಅವರನ್ನು ಬಸ್‌ ನಿರ್ವಾಹಕ ಹಾಗೂ ಪ್ರಯಾಣಿಕರು ಆಂಬುಲೆನ್ಸ್‌ ಮೂಲಕ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!