Sunday, April 28, 2024
spot_imgspot_img
spot_imgspot_img

ಉಳ್ಳಾಲ: ಕೋಡಿಯಲ್ಲಿ ಅಕ್ರಮ ಮರಳುಗಾರಿಕೆ; ದ.ಕ ಜಿಲ್ಲಾ ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ನಿರಂಜನ್ ನೇತೃತ್ವದ ತಂಡದಿಂದ ದಾಳಿ; ಲಾರಿ ಹಾಗೂ 5 ದೋಣಿಗಳು ವಶಕ್ಕೆ

- Advertisement -G L Acharya panikkar
- Advertisement -

ಉಳ್ಳಾಲ: ಕೋಡಿಯಲ್ಲಿ ಅಕ್ರಮ ಮರಳುಗಾರಿಕೆ ಮಾಡುತ್ತಿದ್ದಂತ ಸ್ಥಳಕ್ಕೆ ದ.ಕ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಂದ ದಾಳಿ ನಡೆಸಿದ್ದಾರೆ. 5 ದೋಣಿಗಳು ವಶಕ್ಕೆ ಪಡೆದಿದ್ದಾರೆ.

ಉಳ್ಳಾಲ ಕೋಡಿಯಲ್ಲಿ ಸಮುದ್ರದ ದಂಡೆಗೆ ಈಗಾಗಲೇ ಕಡಲು ಕೊರೆತಕ್ಕೆ ಕಲ್ಲನ್ನು ಹಾಕುತ್ತಿದ್ದು, ಅದೇ ಪ್ರದೇಶದಲ್ಲಿ ಸಮುದ್ರದ ಮರಳನ್ನು ಅಕ್ರಮವಾಗಿ ಸಂಗ್ರಹಿಸಿ ಅದನ್ನು ಲಾರಿಯಲ್ಲಿ ತುಂಬಿ ಅಕ್ರಮವಾಗಿ ಮಾರಾಟ ಮಾಡತಕ್ಕಂತ ತಂಡವನ್ನು ನಿನ್ನೆ ದಕ ಜಿಲ್ಲೆ ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ನಿರಂಜನ್ ಹಾಗೂ ಅಲ್ಲಿನ ಭೂ ವಿಜ್ಞಾನಿ ಮಹಾದೇಶ್ವರ ಅವರ ತಂಡದಿಂದ ನಿನ್ನೆ ಬೆಳಗ್ಗೆ ನಸುಕಿನ ವೇಳೆ ದಾಳಿ ನಡೆಸಿ ಅಕ್ರಮವಾಗಿ ಲಾರಿಯಲ್ಲಿ ಸಾಗಾಟ ಮಾಡುವ 5 ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಈಗಾಗಲೇ ಸರ್ಕಾರಿ ಉಳ್ಳಾಲ ಕಡಲು ಕೊರೆತವನ್ನು ತಡೆಗಟ್ಟಲು ಇದೇ ಪ್ರದೇಶದಲ್ಲಿ ಈ ರೀತಿಯ ಮರಳುಗಾರಿಕೆಯಿಂದ ಸಾರ್ವಜನಿಕರಿಗೆ ಅನೇಕ ತೊಂದರೆಗಳು ಆಗುತ್ತಿರುವುದು ಕಂಡುಬರುತ್ತದೆ. ಅಲ್ಲದೇ ಸ್ಥಳೀಯರಿಗೂ ಆಕ್ಷೇಪಗಳು ಸರ್ಕಾರದಿಂದ ಬಂದಿದೆ.

vtv vitla
vtv vitla

ಆದರೂ ಅಲ್ಲಿನ ಸ್ಥಳೀಯಾಡಳಿತ, ಪೊಲೀಸ್ ಇಲಾಖೆ ಇಷ್ಟರವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಆದರೆ ಇದೀಗ ಗಣಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಸಂಗ್ರಹಿಸಿದ ಮರಳು ಮತ್ತು ಲಾರಿಯನ್ನು ವಶ ಪಡಿಸಿಕೊಂಡಿದ್ದಾರೆ.

ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಶೇಷ ತಂಡವೊಂದು ಜಿಲ್ಲೆಯಲ್ಲಿ ನಡೆಯತಕ್ಕಂತಹ ಅಕ್ರಮ ಮರಳುಗಾರಿಕೆ ಅಥವಾ ಇನ್ನಾವುದೇ ಅಕ್ರಮ ಗಣಿಗಾರಿಕೆ ವಿರುದ್ಧ ದಾಳಿಯನ್ನು ಮಾಡುತ್ತಿದ್ದು, ಅನೇಕ ಕಡೆಗಳಲ್ಲಿ ಅದಕ್ಕೆ ಸಂಬಂಧಿಸಿದ ಲಾರಿ, ಮರಳು, ದೋಣಿ ಅಲ್ಲದೇ ಇನ್ನಿತರ ಗಣಿ ಇಲಾಖೆಗೆ ಸಂಬಂಧಿಸಿದ ಅನೇಕ ಖನಿಜಗಳನ್ನು ವಶಪಡಿಸಿಕೊಂಡಿದ್ದಾರೆ.

- Advertisement -

Related news

error: Content is protected !!