Friday, April 26, 2024
spot_imgspot_img
spot_imgspot_img

ಉಳ್ಳಾಲ: ನಕಲಿ ಆರ್ ಟಿಪಿಸಿಆರ್ ವರದಿ ತಂದಿದ್ದ ಕೇರಳ ಮೂಲದ ನಾಲ್ವರು ಅರೆಸ್ಟ್

- Advertisement -G L Acharya panikkar
- Advertisement -
driving

ಉಳ್ಳಾಲ: ಮಂಗಳೂರು ಪ್ರವೇಶಕ್ಕೆ ನಕಲಿ ಆರ್ ಟಿಪಿಸಿಆರ್ ನೆಗೆಟಿವ್ ವರದಿ ತಂದ ಕೇರಳದ ನಾಲ್ವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ತಲಪಾಡಿಯಲ್ಲಿ ಗುರುವಾರ ನಡೆದಿದೆ.

ಬಂಧಿತರನ್ನು ಕೇರಳದ ಆದಿಲ್, ಹನಿನ್, ಇಸ್ಮಾಯಿಲ್ ಮತ್ತು ಅಬ್ದುಲ್ ತಮೀಮ್ ಎನ್ನಲಾಗಿದ್ದು, ಈ ನಾಲ್ವರು ಮೊಬೈಲ್ ನಲ್ಲಿ ಎಡಿಟ್ ಮಾಡಿದ್ದ ನಕಲಿ ರಿಪೋರ್ಟ್ ತೋರಿಸಿ ಮಂಗಳೂರಿಗೆ ಬರಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಪರಿಶೀಲನೆ ನಡೆಸಿದಾಗ ನಕಲಿ‌ ಎಂಬುದು ಪತ್ತೆಯಾಗಿದೆ. ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಕೇರಳದಿಂದ ಬರುವಾಗ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿದವರಿಗೆ ದಕ್ಷಿಣ ಕನ್ನಡ ಜಿಲ್ಲೆ ಬಂದ ನಂತರ ಕೋವಿಡ್-19 ದೃಢವಾಗುತ್ತಿದೆ. ಹೀಗಾಗಿ ಆರ್ ಟಿಪಿಸಿಆರ್ ನೆಗೆಟಿವ್ ವರದಿಯ ದೃಢತೆಯನ್ನು ಪರೀಕ್ಷಿಸಲು ದಕ್ಷಿಣ‌ಕನ್ನಡ ಜಿಲ್ಲಾಡಳಿತ ಮುಂದಾಗಿದೆ. ನೆಗೆಟಿವ್ ವರದಿಯೊಂದಿಗೆ ಕೇರಳದಿಂದ ಜಿಲ್ಲೆಗೆ‌ ಬರುವ‌ ವಿದ್ಯಾರ್ಥಿಗಳಿಗೆ ಏಳು ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಏಳು ದಿನಗಳ‌ ನಂತರ ಮತ್ತೊಮ್ಮೆ ಆರ್ ಟಿಪಿಸಿಆರ್ ಪರೀಕ್ಷೆ‌ ಮಾಡಲಾಗುತ್ತಿದೆ.

- Advertisement -

Related news

error: Content is protected !!