Monday, May 6, 2024
spot_imgspot_img
spot_imgspot_img

ಉಳ್ಳಾಲ: ಮಾರಕಾಸ್ತ್ರ ತೋರಿಸಿ, ಜೀವ ಬೆದರಿಕೆಯೊಡ್ಡಿ ಜಾನುವಾರು ಕಳವು; ಮೂವರು ಅಂದರ್‌

- Advertisement -G L Acharya panikkar
- Advertisement -

ಉಳ್ಳಾಲ: ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆಯೊಡ್ಡಿ ಜಾನುವಾರು ಕಳವು ಗೈದ ಮೂವರು ಆರೋಪಿಗಳನ್ನು ಉಳ್ಳಾಲದ ಮಾಡೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ಕಸಬಾ ಗ್ರಾಮದ ಟಿಪ್ಪು ನಗರದ ಜಾಬೀರ್ (24), ಫರಂಗಿಪೇಟೆ ಅಮ್ಮೆಮ್ಮಾರ್ ಮಸೀದಿ ಬಳಿಯ ಹೈದರಾಲಿ(24), ಬಂಟ್ವಾಳ ಸಿದ್ದಕಟ್ಟೆಯ ಸಂಗಬೆಟ್ಟುವಿನ ಮುಹಮ್ಮದ್ ಆರೀಫ್(30) ಬಂಧಿತರು.

ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ. ಮಾಡೂರು ಸೈಟ್‌ನಲ್ಲಿ ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆ ಹಾಕಿ ಜಾನುವಾರು ಕಳ್ಳತನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಎಸಿಪಿ ದಿನಕರ್ ಶೆಟ್ಟಿ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಸಂದೀಪ್ ಜಿ.ಎಸ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸಿದೆ.

ಘಟನೆಯ ವಿವರ:

ಮಾಡೂರು ಸೈಟ್ ನಿವಾಸಿ ಸತೀಶ್ ಎಂಬವರಿಗೆ ಸೇರಿದ ರೂ. 30,000 ಬೆಲೆಬಾಳುವ 4 ವರ್ಷ ಪ್ರಾಯದ ಹೋರಿ ಎತ್ತನ್ನು ಆರೋಪಿಗಳು ಕಳವು ನಡೆಸಿದ್ದರು. ಆ.22. ರಂದು ಮಾಡೂರು ವನದುರ್ಗ ಅಯ್ಯಪ್ಪ ಮಂದಿರದ ಅಶ್ವತ್ಥ ಕಟ್ಟೆಯ ಬಳಿ ಕಟ್ಟಿ ಹಾಕಲಾಗಿದ್ದ ಹೋರಿಯನ್ನು ನಸುಕಿನ ಜಾವ 4.25 ಕ್ಕೆ ಇಬ್ಬರು ಆರೋಪಿಗಳು ಬಲಾತ್ಕಾರವಾಗಿ ಎಳೆದೊಯ್ಯುವಾಗ ಜೋರಾಗಿ ಕೂಗುವುದನ್ನು ಗಮನಿಸಿ ಮಾಲೀಕ ಸತೀಶ್ ಅವರು ಓಡಿಬಂದಿದ್ದರು. ಈ ವೇಳೆ ತಲವಾರು ಮತ್ತು ದೊಣ್ಣೆ ತೋರಿಸಿದ ದುಷ್ಕರ್ಮಿಗಳು, ಅಡ್ಡಿ ಪಡಿಸಿದರೆ ಕೊಲ್ಲುವುದಾಗಿ ಜೀವ ಬೆದರಿಕೆಯೊಡ್ಡಿ ಜಾನುವಾರನ್ನು ಕಾರಿನೊಳಗಡೆ ತುಂಬಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ತನಿಖೆ ನಡೆಸಿದ ಎಸಿಪಿ ನೇತೃತ್ವದ ಉಳ್ಳಾಲ ಪೊಲೀಸ್ ತಂಡ ಮೂವರನ್ನು ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯ ಬಂಧನ ಇನ್ನಷ್ಟೇ ಆಗಬೇಕಿದ್ದು, ಆತ ಪರಾರಿಯಾಗಿದ್ದಾನೆ.

- Advertisement -

Related news

error: Content is protected !!