Thursday, April 18, 2024
spot_imgspot_img
spot_imgspot_img

ಎದೆಗೂಡಿಗೆ ಗುಂಡೇಟು; ಅಂದ್ಕೊಂಡಿದ್ದು ಬೆಕ್ಕು ಪರಚಿದೆಯೆಂದು..! ಸಾವಿನ ದವಡೆಯಿಂದ ಜಸ್ಟ್ ಮಿಸ್!

- Advertisement -G L Acharya panikkar
- Advertisement -

ರಾಜಸ್ಥಾನ: ಗುಂಡೇಟಿಗೂ ಬೆಕ್ಕು ಪರಚಿದಾಗ ಆಗುವ ನೋವಿಗೂ ಅಜಗಜಾಂತರ ವ್ಯತ್ಯಾಸವಿದೆ. ಬೆಕ್ಕು ಪರಚಿದಾಗ ಲಘುವಾದ ಗುರುತು ಮೂಡಿ ಸ್ವಲ್ಪ ನೋವಾದರೆ, ಗುಂಡೇಟು ಪ್ರಾಣಕ್ಕೇ ಸಂಚಕಾರ ತರಬಲ್ಲದು. ಆದರೆ ರಾಜಸ್ಥಾನದ ಈ ವ್ಯಕ್ತಿಗೆ ಎರಡೂ ರೀತಿಯ ಗಾಯಗಳ ನಡುವೆ ವ್ಯತ್ಯಾಸ ಅರಿವಿಗೇ ಬಂದಿಲ್ಲ.

ನೇಮಿ ಚಂದ್ ಹೆಸರಿನ ಈ ಲೈನ್‌ಮನ್ ಸೆಪ್ಟೆಂಬರ್‌ 16ರಂದು ತನ್ನ ಎದೆಗೂಡಿಗೆ ಗುಂಡೊಂದು ಬಂದು ತಗುಲಿದಾಗ ಎಲ್ಲೋ ಬೆಕ್ಕು ಪರಚಿರಬೇಕೆಂದುಕೊಂಡಿದ್ದಾರೆ. ಮುಂದಿನ ಏಳು ಗಂಟೆಗಳ ಕಾಲ ನೋವನ್ನು ಲೆಕ್ಕಕ್ಕೆ ಹಾಕಿಕೊಳ್ಳದ 35 ವರ್ಷದ ಈತ ಹಾಗೇ ತನ್ನ ಕೋಣೆಯಲ್ಲಿ ಮಲಗಿಬಿಟ್ಟಿದ್ದಾರೆ.

ಚಂದ್‌ರ ಕೋಣೆಯಲ್ಲಿ ಜೊತೆಯಾಗಿ ವಾಸಿಸುವ ಸ್ನೇಹಿತರೊಬ್ಬರು ಆತನ ಪಕ್ಕದಲ್ಲೇ ಗುಂಡೊಂದು ಇರುವುದನ್ನು ಕಂಡಿದ್ದಾರೆ. ಈ ಪತ್ತೆಯಿಂದಾಗಿ ಕೊನೆಗೂ ತನಗೆ ಆಗಿರುವುದು ಬೆಕ್ಕು ಪರಚಿದ ಗಾಯವಲ್ಲ ಎಂದು ಅರಿತ ಚಂದ್ ಎಕ್ಸ್‌ ರೇ ಪರೀಕ್ಷೆ ಮಾಡಿಸಿದಾಗ ತನ್ನ ಚರ್ಮದೊಳಗೆ ಹೊಕ್ಕ ಗುಂಡು ಅಮೂಲ್ಯವಾದ ಅಂಗಗಳಿಂದ ಕೆಲವೇ ಮಿಮೀಗಳ ದೂರದಲ್ಲಿ ನಿಂತುಬಿಟ್ಟಿದೆ ಎಂದು ಅರಿವಾಗಿದೆ.

ಇದಾದ ಮಾರನೇ ದಿನ ಶಸ್ತ್ರಚಿಕಿತ್ಸೆಗೆ ಒಳಗಾದ ಚಂದ್, ಗುಂಡನ್ನು ಹೊರ ತೆಗೆಸಿದ್ದಾರೆ. ಗುಂಡನ್ನು ಹೊರತೆಗೆದ ಇಬ್ಬರು ವೈದ್ಯರು ಗಾಯಕ್ಕೆ ನಂಜಾಗದಂತೆ ಔಷಧಿ ಹಾಕಿದ್ದಾರೆ. ಕೆಲವೇ ದಿನಗಳಲ್ಲಿ ಚಂದ್ ಪೂರ್ಣ ಗುಣಮುಖರಾಗುವ ನಿರೀಕ್ಷೆ ಇದೆ. ಕೊಲೆ ಯತ್ನದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡ ರಾಣಿವಾಡಾ ಪೊಲೀಸ್ ಠಾಣೆಯ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!