Friday, June 19, 2026
spot_imgspot_img
spot_imgspot_img

ಎರುಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತ

- Advertisement -
- Advertisement -

ಎರುಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ಸುಜ್ಞಾನ ಮಹಿಳಾ ಮಂಡಳಿ ರಿ. ಎರುಂಬು ಇದರ ಸಹಭಾಗಿತ್ವದಲ್ಲಿ ಎರುಂಬು ಬಾಲಕೃಷ್ಣ ಕಾರಂತರ ನೇತೃತ್ವದಲ್ಲಿ ಪೂರ್ವಾಹ್ನ ಶ್ರೀ ದೇವರ ಸನ್ನಿಧಿಯಲ್ಲಿ ಕಾರ್ತಿಕ ಪೂಜೆ, ಸಾಮೂಹಿಕ ಪ್ರಾರ್ಥನೆ ಸಹಿತ ಗಂಗಾ ಪೂಜೆಯೊಂದಿಗೆ ನಾಮಸಂಕೀರ್ತನೆ ಪೂರ್ವಕ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯು ನಡೆಯಿತು. ಐನೂರಕ್ಕೂ ಮೇಲ್ಪಟ್ಟು ಭಕ್ತಾದಿಗಳು ಪೂಜಾ ಸೇವೆ ಸಲ್ಲಿಸಿ ಪುನೀತರಾದರು. ಸಾರ್ವಜನಿಕ ಅನ್ನಸಂತರ್ಪಣೆಯು ಜರಗಿತು. ಅಳಿಕೆ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಶ್ರೀ ಪದ್ಮನಾಭ ಪೂಜಾರಿ ಸಣ್ಣಗುತ್ತು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜಿನ್ನಪ್ಪ ಗೌಡ, ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಶಾಲಿನಿ ಎರುಂಬು ಮತ್ತು ಪದಾಧಿಕಾರಿಗಳು ಹಾಗೂ ಊರ ಗಣ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!