Saturday, May 4, 2024
spot_imgspot_img
spot_imgspot_img

ಕಡೇಶಿವಾಲಯ: (ಎ.9 ರಿಂದ 23) ಕಡೇಶಿವಾಲಯ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ

- Advertisement -G L Acharya panikkar
- Advertisement -

ಕಡೇಶಿವಾಲಯ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ 9-4-2024ನೇ ಮಂಗಳವಾರದಿAದ 23-4-2024ನೇ ಮಂಗಳವಾರದ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯಲಿದೆ. ತಾ. 1-4-2024ನೇ ಸೋಮವಾರ ಬೆಳಗ್ಗೆ ಗಂಟೆ 10-45ಕ್ಕೆ ಗೊನೆ ಮುಹೂರ್ತ ನಡೆದು ತಾ. 9-4-2024ನೇ ಮಂಗಳವಾರ ಮಧ್ಯಾಹ್ನ ಮಹಾಪೂಜೆ ನಂತರ ಧ್ವಜಾರೋಹಣ ನಡೆಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಎಪ್ರಿಲ್ 10 ರಂದು ಪ್ರತಿಷ್ಠಾ ಮಹೋತ್ಸವ ನಡೆದು ಇಂದು ಶ್ರೀ ದೇವರಿಗೆ ನಿತ್ಯಬಲಿ, ಮಹಾಪೂಜೆ. ನಡೆಯಿತು. ಎ. 13ನೇ ಶನಿವಾರ ಸಂಕ್ರಮಣದAದು ಮಧ್ಯಾಹ್ನ ಮಹಾಪೂಜೆ, ರಾತ್ರಿ ಉತ್ಸವ ನಡೆಯಲಿದೆ. ಎ.14ನೇ ರವಿವಾರಬೆಳಗ್ಗೆ ಗಂಟೆ 7-00ರಿಂದ ಉತ್ಸವ, ಮಧ್ಯಾಹ್ನ ಮಹಾಪೂಜೆ, ಬಳಿಕ ರಾತ್ರಿ ಗಂಟೆ 6-00ರಿಂದ ಉತ್ಸವ ನಡೆಯಲಿದೆ. ಎ.15 ನೇ ಸೋಮವಾರ ಬೆಳಗ್ಗೆ ಗಂಟೆ 7-00ರಿಂದ ಉತ್ಸವ, ಮಧ್ಯಾಹ್ನ ಮಹಾಪೂಜೆ ರಾತ್ರಿ ಗಂಟೆ 6-00ರಿಂದ ಶ್ರೀ ದೇವರಿಗೆ ಉತ್ಸವ ನಡೆಯಲಿದೆ. ಎ.16 ನೇ ಮಂಗಳವಾರ ಬೆಳಗ್ಗೆ ಗಂಟೆ 8-00ರಿಂದ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ,ಮಧ್ಯಾಹ್ನ ಮಹಾಪೂಜೆ, ಬಳಿಕ ರಾತ್ರಿ ಗಂಟೆ 6-00ರಿಂದ ಉತ್ಸವ ನಂತರ ಬೀದಿ ಸವಾರಿ, ಕಟ್ಟೆಪೂಜೆ ನಡೆಯಲಿದೆ.

ಎ.17 ನೇ ಬುಧವಾರ ಮಧ್ಯಾಹ್ನ ಮಹಾಪೂಜೆ ರಾತ್ರಿ ಗಂಟೆ 6-00ರಿಂದ ಉತ್ಸವ, ಕಟ್ಟೆಪೂಜೆ ನಡೆಯಲಿದೆ. ಎ.18 ನೇ ಗುರುವಾರ ಮಧ್ಯಾಹ್ನ ಮಹಾಪೂಜೆ ರಾತ್ರಿ ಚಂದ್ರಮAಡಲ ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ. ಎ. 19 ನೇ ಶುಕ್ರವಾರ ಉತ್ಸವ, ಶ್ರೀ ದೇವರ ಬೀದಿ ಸವಾರಿ ನಡೆಯಲಿದೆ. ಎ.20 ನೇ ಶನಿವಾರ ಮಧ್ಯಾಹ್ನ ಪಲ್ಲಪೂಜೆ, ಮಹಾಪೂಜೆ ಬಳಿಕ ರಾತ್ರಿ ಶ್ರೀ ದೇವರ ವೈಭವದ ಮಹಾರಥೋತ್ಸವ, ಸುಡುಮದ್ದು ಪ್ರದರ್ಶನ ನಡೆಯಲಿದೆ. ಎ. 21 ನೇ ರವಿವಾರ ಬೆಳಗ್ಗೆ 7-25ಕ್ಕೆ ಕವಾಟೋದ್ಘಾಟನೆ ನಡೆದು ಬಳಿಕ ತುಲಾಭಾರ ಸೇವೆ ನಂತರ ಮಹಾಪೂಜೆ ನಡೆಯಲಿದೆ. ಸಂಜೆ ಗಂಟೆ 6-00ರಿಂದ ಉತ್ಸವ, ಕಟ್ಟೆಪೂಜೆ, ಅನ್ನಸಂತರ್ಪಣೆ, ಅವಭೃತ ಸ್ನಾನ, ಧ್ವಜಾವರೋಹಣ ನಡೆಯಲಿದೆ.

ಎ. 22 ನೇ ಸೋಮವಾರ ರಾತ್ರಿ ಮಹಾಪೂಜೆ ನಡೆದು ಬಳಿಕ ಶ್ರೀ ನಾರಾಳ್ತಾಯ ಮತ್ತು ಇತರ ದೈವಗಳ ನೇಮೋತ್ಸವ ನಡೆಯಲಿದೆ.

ಎ. 23 ನೇ ಮಂಗಳವಾರ ಮಧ್ಯಾಹ್ನ ಸಂಪ್ರೋಕ್ಷಣೆ, ಮಹಾಪೂಜೆ,ಬಳಿಕ ಮಂಗಲ, ಮಂತ್ರಾಕ್ಷತೆ ನಡೆಯಲಿದೆ. ದಿನಾಂಕ: 16-04-2024 ನೇ ಮಂಗಳವಾರ ಸಂಜೆ 6:00 ರಿಂದ 8:00 ವರೆಗೆ “ಯಕ್ಷ ಮಂಜುಳಾ”ಕದ್ರಿ ಮಂಗಳೂರು ಇವರಿಂದ ಮಹಿಳಾ ಯಕ್ಷಗಾನ ತಾಳಮದ್ದಳೆ ಪ್ರಸಂಗ: ಇಂದ್ರಜಿತು ಕಾಳಗ ನಡೆಯಲಿದೆ. ದಿನಾಂಕ: 17-04-2024ನೇ ಬುಧವಾರ ರಾತ್ರಿ 8:00 ರಿಂದ ಗಯಾಪದ ಕಲಾವಿದೆರ್ ಉಬಾರ್ ಇವರಿಂದ ‘ಮುರಳಿ ಈ ಪಿರ ಬರೊಲಿ’ ತುಳು ಹಾಸ್ಯ ಮಯ ನಾಟಕ ನಡೆಯಲಿದೆ. ದಿನಾಂಕ: 18-04-2024ನೇ ಗುರುವಾರ ರಾತ್ರಿ 7:00 ರಿಂದ ಶ್ರೀ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ. ದಿನಾಂಕ 19-4-2024ನೇ ಶುಕ್ರವಾರ ರಾತ್ರಿ ಗಂಟೆ 7-00ರಿಂದ ಭಾರತೀಯ ನೃತ್ಯಕಲಾ ಶಾಲೆ ಪುತ್ತೂರು ನಾಟ್ಯ ವಿದುಷಿ ಡಾ|| ಶ್ರುತಿ ರೋಷನ್ ಬೆಳ್ಳೂರು ಇವರ ಶಿಷ್ಯೆಯರಿಂದ ನಾಟ್ಯ ವೈಭವ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 20-4-2024ನೇ ಶನಿವಾರ ರಾತ್ರಿ ಗಂಟೆ 9-00ರಿಂದ ಯುವಶಕ್ತಿ ಕಡೇಶಿವಾಲಯ (ರಿ.) ಅರ್ಪಿಸುವ “ರಂಗಭೂಷಣ’ ಮಣಿ ಕೋಟೆಬಾಗಿಲು ಕಥೆ-ಸಂಭಾಷಣೆ-ನಿರ್ದೇಶನ-ಸಾರಥ್ಯದ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸುವ ಅದ್ದೂರಿ ರಂಗ ವಿನ್ಯಾಸದ ಕುತೂಹಲಭರಿತ, ಹಾಸ್ಯ ನಾಟಕ ಕದಂಬ ಪ್ರದರ್ಶನಗೊಳ್ಳಲಿದೆ. ದಿನಾಂಕ 21-4-2024ನೇ ರವಿವಾರ ರಾತ್ರಿ ಗಂಟೆ 8-00ರಿಂದ ಬೆನಕ ಆರ್ಟ್ಸ್ ಕುಡ್ಲ ಅರ್ಪಿಸುವ ‘ಪೊರಿಪುದಪ್ಪೆ ಜಲದುರ್ಗೆ’ ಸಾಂಸ್ಕೃತಿಕ ವೈಭವ ನಡೆಯಲಿದೆ.

- Advertisement -

Related news

error: Content is protected !!