Friday, May 17, 2024
spot_imgspot_img
spot_imgspot_img

ಏಕರೂಪ ನಾಗರಿಕ ಸಂಹಿತೆಯು 22 ಕಾನೂನು ಆಯೋಗದ ಕೈಗೆ’- ಕಿರಣ್ ರಿಜಿಜ್‌

- Advertisement -G L Acharya panikkar
- Advertisement -

ನವದೆಹಲಿ: ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಹೊಸ ಕಾನೂನು ಆಯೋಗವು ಮುಂದುವರೆಸಲಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜ್‌ ಹೇಳಿದ್ದಾರೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಲೋಕಸಭೆ ಶೂನ್ಯವೇಳೆ ಮಾತನಾಡಿ, ಏಕರೂಪ ನಾಗರಿಕ ಸಂಹಿತೆಯ ವಿಷಯವನ್ನು ಅಲ್ಲಿ ಪ್ರಸ್ತಾಪಿಸಿದ್ದರು.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ರಿಜಿಜು, ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಶಿಫಾರಸು ಮಾಡುವ ಪ್ರಸ್ತಾವನೆಯನ್ನು 21ನೇ ಕಾನೂನು ಆಯೋಗಕ್ಕೆ ಹಸ್ತಂತರಿಸಲಾಗಿತ್ತು, ಆದರೆ, ಹಿಂದಿನ ಕಾನೂನು ಆಯೋಗದ ಅವಧಿಯು ಆಗಸ್ಟ್31, 2018ರಲ್ಲಿ ಕೊನೆಗೊಂಡಿತ್ತು, ಹಾಗಾಗಿ 22ನೇ ಕಾನೂನು ಆಯೋಗವನ್ನು ಏಕರೂಪ ಸಂಹಿತೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಯಾವುದೇ ವಿಷಯವಾದರು ಅದರ ಪ್ರಮುಖ್ಯತೆ ಮತ್ತು ಸೂಕ್ಷ್ಮತೆಯನ್ನು ತಿಳಿದುಕೊಳ್ಳಬೇಕು, ಅಲ್ಲದೆ ವಿವಿಧ ಸಮುದಾಯಗಳನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನು ನಿಬಂಧನೆಯ ಬಗ್ಗೆ ಅಧ್ಯಯನದ ಅಗತ್ಯವಿದೆ ಎಂಬ ಆಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಇಲ್ಲ ವಿಷಯವನ್ನು ಹೊಸ ಕಾನೂನು ಆಯೋಗಕ್ಕೆ ವಹಿಸಲಾಗಿದೆ ಎಂದರು.

- Advertisement -

Related news

error: Content is protected !!