Sunday, May 5, 2024
spot_imgspot_img
spot_imgspot_img

27 ವರ್ಷಗಳ ಬಳಿಕ ವಿಶ್ವ ಸುಂದರಿ ಸ್ಪರ್ಧೆ ಭಾರತದಲ್ಲಿ ಆಯೋಜನೆ..! 71ನೇ ವಿಶ್ವಸುಂದರಿಯಾಗಲು ಸಿನಿ ಶೆಟ್ಟಿ ಪಟ್ಟು..!

- Advertisement -G L Acharya panikkar
- Advertisement -

ಬರೋಬ್ಬರಿ 27 ವರ್ಷಗಳ ಬಳಿಕ ವಿಶ್ವದ ಅತ್ಯಂತ ಪ್ರಖ್ಯಾತ ಬ್ಯೂಟಿ ಪೇಜೆಂಟ್‌ ವಿಶ್ವ ಸುಂದರಿ ಸ್ಪರ್ಧೆಗೆ ಭಾರತ ಆತಿಥ್ಯ ವಹಿಸಿಕೊಳ್ಳಲಿದೆ. ಈ ಕುರಿತಾಗಿ ಮಿಸ್‌ ವರ್ಲ್ಡ್‌ ಆರ್ಗನೈಜೇಷನ್‌ನ ಮುಖ್ಯಸ್ಥೆ ಜೂಲಿಯಾ ಮೂರ್ಲೆ ಅಧಿಕೃತವಾಗಿ ಗುರುವಾರ ಘೋಷಣೆ ಮಾಡಿದ್ದಾರೆ.

ಈ ಸ್ಪರ್ಧೆಯಲ್ಲಿ 130 ದೇಶಗಳ ಸುಂದರಿಯರು ಭಾಗವಹಿಸಲಿದ್ದಾರೆ. ಅಂದಾಜು ಒಂದು ತಿಂಗಳ ಕಾಲ ನಡೆಯಲಿರುವ ಈ ಸ್ಪರ್ಧೆ ಅಂತಿಮ ಸುತ್ತು ನವೆಂಬರ್‌-ಡಿಸೆಂಬರ್‌ನಲ್ಲಿ ನಡೆಯಲಿದೆ. ಪ್ರತಿಷ್ಠಿತ ಮಿಸ್‌ ವರ್ಲ್ಡ್‌ ಚಾಂಪಿಯನ್‌ಷಿಪ್‌ಗೆ ಭಾರತ ಆತಿಥ್ಯ ವಹಿಸುತ್ತಿರುವುದು 2ನೇ ಬಾರಿಯಾಗಿದೆ. ಇದಕ್ಕೂ ಮುನ್ನ 1996ರಲ್ಲಿ ಮೊಟ್ಟಮೊದಲ ಬಾರಿಗೆ ಭಾರತ ಮಿಸ್‌ ವರ್ಲ್ಡ್‌ ಅನ್ನು ಆಯೋಜನೆ ಮಾಡಿತ್ತು.

ಗುರುವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಿಸ್‌ ವರ್ಲ್ಡ್‌ ಆರ್ಗನೈಜೇಷನ್‌ನ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಹಾಗೂ ಮುಖ್ಯಸ್ಥೆ ಜೂಲಿಯಾ ಮೂರ್ಲೆ, ’71ನೇ ಆವೃತ್ತಿಯ ಮಿಸ್‌ ವರ್ಲ್ಡ್‌ ಸ್ಪರ್ಧೆಗೆ ಭಾರತ ಆತಿಥ್ಯ ವಹಿಸಿಕೊಂಡಿದೆ ಎಂದು ಘೋಷಣೆ ಮಾಡಲು ಸಂತೋಷವಾಗಿದೆ. ನನಗೆ 30 ವರ್ಷವಾಗಿದ್ದಾಗ ನಾನು ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೆ. ಅಂದಿನಿಂದ ಇಂದಿನವರೆಗ ಭಾರತ ಹಾಗೂ ಇಲ್ಲಿನ ಜನರ ಪ್ರೀತಿಯು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ ಎಂದರು. ಇನ್ನು ಕಾರ್ಯಕ್ರಮದಲ್ಲಿ 2022ರ ಮಿಸ್‌ ವರ್ಲ್ಡ್‌ ಆಗಿರುವ ಕ್ಯಾರೋಲಿನಾ ಬಿಲಾವಸ್ಕಾ ಕೂಡ ಹಾಜರಿದ್ದರು. ಇನ್ನು 2023ರ ಮಿಸ್‌ ವರ್ಲ್ಡ್‌ನಲ್ಲಿ ಭಾರತದ ಸ್ಪರ್ಧಿಯಾಗಿ ಉಡುಪಿ ಮೂಲದ ಮಿಸ್ ಇಂಡಿಯಾ 2022 ಸಿನಿ ಶೆಟ್ಟಿ ಕಣಕ್ಕೆ ಇಳಿಯಲಿದ್ದಾರೆ.

ಪ್ರಸ್ತುತ ಭಾರತದಲ್ಲಿರುವ ವಿಶ್ವ ಸುಂದರಿ, ಪೋಲೆಂಡ್‌ನ ಕ್ಯಾರೋಲಿನಾ ಬಿಲಾವಸ್ಕಾ, ಸೌಂದರ್ಯ ಸ್ಪರ್ಧೆಯ ಬಗ್ಗೆ ಪ್ರಚಾರ ಮಾಡುತ್ತಾ, ವಿಶ್ವ ಸುಂದರಿಯಂತೆಯೇ ಅದೇ ಮೌಲ್ಯಗಳನ್ನು ಪ್ರತಿನಿಧಿಸುವ ಈ ‘ಸುಂದರ ದೇಶದಲ್ಲಿ’ ತನ್ನ ಕಿರೀಟವನ್ನು ಹಸ್ತಾಂತರಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.

ಇಲ್ಲಿವರೆಗೂ ಭಾರತದ ಆರು ಮಂದಿ ಸುಂದರಿಯರು ಮಿಸ್‌ ವರ್ಲ್ಡ್‌ ಆಗಿದ್ದಾರೆ. 1966ರಲ್ಲಿ ರೀಟಾ ಫರಿಯಾ ಮಿಸ್‌ ವರ್ಲ್ಡ್‌ ಆದ ಮೊಟ್ಟ ಮೊದಲ ಭಾರತೀಯೆ. ಅದಾದ ಬಳಿಕ 1994ರಲ್ಲಿ ಐಶ್ವರ್ಯಾ ರೈ ಬಚ್ಛನ್‌ ಈ ಸ್ಪರ್ಧೆ ಜಯಿಸಿದ್ದರು. ಡಯಾನಾ ಹೇಡೆನ್‌ 1997ರಲ್ಲಿ ವಿಶ್ವದ ಸುಂದರಿ ಎನಿಕೊಂಡಿದ್ದರೆ, 199ರಲ್ಲಿ ಯುಕ್ತಾ ಮುಖಿ ಈ ಕಿರೀಟ ಧರಿಸಿದ್ದರು. ಅದಾದ ಬಳಿಕ 2000ದಲ್ಲಿ ಪ್ರಿಯಾಂಕಾ ಚೋಪ್ರಾ ಜಯಿಸಿದ್ದರು. ಇದಾದ 17 ವರ್ಷಗಳ ಬಳಿಕ 2017ರಲ್ಲಿ ಮಾನುಷಿ ಚಿಲ್ಲರ್‌ ಈ ಕಿರೀಟವನ್ನು ತೊಟ್ಟಿದ್ದರು.

ಸಿನಿ ಶೆಟ್ಟಿ ಪಟ್ಟು..!
ತುಳುನಾಡಿನ ಸುಂದರಿಯರು ಸೌಂದರ್ಯ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾನೆ. ಐಶ್ವರ್ಯ ರೈ, ಶ್ರೀನಿಧಿ ಶೆಟ್ಟಿ, ಅಡ್ಲೈನ್ ಕ್ಯಾಸ್ಟೋಲಿನೊ, ದೀವಿತಾ ರೈ ತುಳುನಾಡಿನ ಕಂಪನ್ನು ದೇಶದಾದ್ಯಂತ ಪಸರಿಸಿದ್ದಾರೆ. ಈ ಬಾರಿಯೂ ಸಿನಿ ಶೆಟ್ಟಿ ಪ್ರಬಲ ಸ್ಪರ್ಧಿಯಾಗಿದ್ದು ಟಾಪ್‌ ಸ್ಥಾನದಲ್ಲಿದ್ದಾರೆ.

- Advertisement -

Related news

error: Content is protected !!