Saturday, May 4, 2024
spot_imgspot_img
spot_imgspot_img

ಏಪ್ರಿಲ್ 21-22ಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸ; ಪ್ರಧಾನಿ ಮೋದಿಯೊಂದಿಗೆ ಮಾತುಕತೆ

- Advertisement -G L Acharya panikkar
- Advertisement -

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಏಪ್ರಿಲ್ 21-22ಕ್ಕೆ ಭಾರತ ಪ್ರವಾಸ ಕೈಗೊಂಡಿದ್ದಾರೆ. ಏಪ್ರಿಲ್ 21ರಂದು ಭಾರತಕ್ಕೆ ಆಗಮಿಸಲಿರುವ ಅವರು, ಏಪ್ರಿಲ್ 22ಕ್ಕೆ ವಾಸಪ್ ಆಗಲಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಬೋರಿಸ್ ಜಾನ್ಸನ್, ಈ ವಾರ ನಾನು ಭಾರತಕ್ಕೆ ಹೋಗಲಿದ್ದೇನೆ. ಭಾರತ ಮತ್ತು ಯುಕೆ ಮಧ್ಯೆ ಸುದೀರ್ಘ ಅವಧಿಯ ಸಹಭಾಗಿತ್ವ ಇದೆ. ಅದನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಭೇಟಿ ತುಂಬ ಮಹತ್ವದ್ದು. ಈಗೀಗ ನಿರಂಕುಶ ಆಡಳಿತದ ದೇಶಗಳಿಂದ ವಿಶ್ವದ ಶಾಂತಿ ಮತ್ತು ಸಮೃದ್ಧಿಗೆ ಅಪಾಯ ಉಂಟಾಗುತ್ತಿದೆ. ಹೀಗಾಗಿ ಪ್ರಜಾಪ್ರಭುತ್ವವಿರುವ ರಾಷ್ಟ್ರಗಳು, ಮಿತ್ರ ರಾಷ್ಟ್ರಗಳೆಲ್ಲ ಪರಸ್ಪರ ಅಂಟಿಕೊಂಡು ಒಗ್ಗಟ್ಟಾಗಿರುವುದು ತುಂಬ ಮುಖ್ಯ ಎಂದು ಹೇಳಿದ್ದಾರೆ.

ಇನ್ನೊಂದು ಟ್ವಿಟ್ ಮಾಡಿ, ಭಾರತ ಪ್ರಮುಖ ಆರ್ಥಿಕ ಶಕ್ತಿ ಮತ್ತು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಈ ಅನಿಶ್ಚಿತತೆಯ ಕಾಲದಲ್ಲಿ ಯುಕೆಯ ಪಾಲಿಗೆ ಅತಿ ಹೆಚ್ಚು ಮೌಲ್ಯಯುತವಾದ ಸಹಭಾಗಿ. ನನ್ನ ಭಾರತ ಭೇಟಿ ಎರಡೂ ದೇಶಗಳ ಪಾಲಿಗೆ ಅತ್ಯಂತ ಮುಖ್ಯವಾಗಿದೆ. ನಾವು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ, ಇಂಧನ ಭದ್ರತೆ ಮತ್ತು ರಕ್ಷಣೆಯವರೆಗೆ ಎಲ್ಲ ವಿಚಾರಗಳ ಬಗ್ಗೆಯೂ ಆಳವಾದ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಅಂದಹಾಗೇ, ಏಪ್ರಿಲ್ 21ರಂದು ಭಾರತಕ್ಕೆ ತಲುಪಲಿರುವ ಬೋರಿಸ್ ಜಾನ್ಸನ್ ಏಪ್ರಿಲ್ 22ರಂದು ದೆಹಲಿಯಲ್ಲಿ ಪ್ರಧಾನಿ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ರಷ್ಯಾ-ಉಕ್ರೇನ್ ವಿಚಾರ ಕೂಡ ಪ್ರಮುಖವಾಗಿ ಚರ್ಚೆಗೆ ಬರಲಿದೆ ಎನ್ನಲಾಗಿದೆ.

ಭಾರತ-ಯುಕೆಯ ದ್ವಿಪಕ್ಷೀಯ ಸಂಬಂಧ ಉತ್ತಮವಾಗಿದೆ. ಕಳೆದ ವರ್ಷ ಒಮ್ಮೆಬೋರಿಸ್ ಜಾನ್ಸನ್ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಇದುವರೆಗೆ ಭೇಟಿ ಕೊಡಲು ಸಾಧ್ಯವಾಗಲಿಲ್ಲ. ಭಾರತ-ಯುಕೆ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ಬ್ರಿಟನ್‌ನಲ್ಲಿ ಭಾರತ (ಭಾರತದ ಕಂಪನಿಗಳು) ಸುಮಾರು 530 ಮಿಲಿಯನ್ ಪೌಂಡ್ ಗಳಷ್ಟು ಹೂಡಿಕೆ ಮಾಡಲು ಕಳೆದ ವರ್ಷ ಮೇ ತಿಂಗಳಲ್ಲಿ ಎರಡೂ ಸರ್ಕಾರಗಳು ಸಮ್ಮತಿಸಿದ್ದವು. ಭಾರತದ ಕಂಪನಿಗಳ ಹೂಡಿಕೆಯಿಂದ ಬ್ರಿಟನ್‌ನಲ್ಲಿ ಉದ್ಯೋಗಗಳು ಸೃಷ್ಟಿಯಾಗಿವೆ ಎನ್ನಲಾಗಿದೆ. ಅಂದಹಾಗೇ, ಏಪ್ರಿಲ್ 1ರಂದು ಬೋರಿಸ್ ಜಾನ್ಸನ್ ಗುಜರಾತ್‌ನ ಅಹ್ಮದಾಬಾದ್‌ಗೆ ಬಂದಿಳಿಯಲಿದ್ದಾರೆ. ಸದ್ಯಬ್ರಿಟನ್‌ನಲ್ಲಿರುವ ಆಂಗ್ಲೋ-ಇಂಡಿಯನ್ ನಾಗರಿಕರಲ್ಲಿ ಅರ್ಧದಷ್ಟು ಜನರ ಪೂರ್ವಜರ ನಗರ ಇದೇ ಅಹ್ಮದಾಬಾದ್.ಹೀಗಾಗಿ ಬೋರಿಸ್ ಜಾನ್ಸನ್ ಮೊದಲು ಇಲ್ಲಿಗೇ ತಲುಪಲಿದ್ದಾರೆ.

- Advertisement -

Related news

error: Content is protected !!