Monday, April 29, 2024
spot_imgspot_img
spot_imgspot_img

ಏಮಾಜೆ ಕಿ.ಪ್ರಾ ಶಾಲೆಯಲ್ಲಿ ಸುಮಾರು 14 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ವಿವಿಧ ಕಾಮಗಾರಿಗಳ ಉದ್ಘಾಟನೆ

- Advertisement -G L Acharya panikkar
- Advertisement -
vtv vitla

ವಿಟ್ಲ: ಶಾಸಕನಾಗಿ ಇರಲಿ ಅಥವಾ ಇಲ್ಲದಿರಲಿ ಒಳ್ಳೆಯ ಕೆಲಸಗಳ ಜೊತೆ ಯಾವಾಗಲೂ ನಾನಿದ್ದೇನೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾೖಕ್‌ ಹೇಳಿದರು.

ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಏಮಾಜೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತನ್ನ ಅನುದಾನದಲ್ಲಿ ಸುಮಾರು 14 ಲಕ್ಷ ವೆಚ್ಚದ ನಿರ್ಮಾಣಗೊಳ್ಳಲಿರುವ ಕಲಿಕಾ ಕೊಠಡಿಯ ಶಿಲಾನ್ಯಾಸ ಮಾಡಿ, ಮುತ್ತೂಟ್‌ ಫೈನಾನ್ಸ್ ವತಿಯಿಂದ ನಿರ್ಮಿಸಲ್ಪಟ್ಟ ಬಾಲವನವನ, ಹಾಗೂ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ ನರೇಗಾ ಯೋಜನೆಯ ಅಡಿಯಲ್ಲಿ ನಿರ್ಮಿಸಲ್ಪಟ್ಟ ಶಾಲಾ ಆವರಣ ಗೋಡೆ ಹಾಗೂ ಆಟದ ಮೈದಾನ ವಿಸ್ತರಣಾ, ಹರೀಶ್ ಮುಜಾಲ ಒದಗಿಸಿಕೊಟ್ಟ ಬಾಸ್ಕೆಟ್ ಬಾಲ್ ಕ್ರೀಡಾ ಸಲಕರಣೆ ಮೊದಲಾದ ಕಾಮಗಾರಿಗಳನ್ನು ಉದ್ಘಾಟಿಸಿ ಮಾತಾಡಿದರು.

ತನ್ನ ಕ್ಷೇತ್ರದ ಹಳ್ಳಿ ಪ್ರದೇಶದ ಏಮಾಜೆ ಶಾಲೆಯನ್ನು ಬಾಲವನ ನಿರ್ಮಿಸಲು ಆಯ್ಕೆ ಮಾಡಿ ಬಹಳ ಸುಂದರವಾಗಿ ಬಾಲವನ ನಿರ್ಮಿಸಿಕೊಟ್ಟ ಮುತ್ತೂಟ್ ಫೈನಾನ್ಸಿನ ಸಂಸ್ಥೆಯನ್ನು ಶಾಸಕರು ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲೆಗೆ ಸಹಕರಿಸಿದ ವಿವಿಧ ಗಣ್ಯರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಕೀಲಾ ಕೃಷ್ಣ ಮಿತ್ತಕೋಡಿ, ಪಂಚಾಯತ್ ಸದಸ್ಯರಾದ ಸವಿತಾ ಡಿ ಪೂಜಾರಿ, ಧನಂಜಯ ಗೌಡ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆಮಲ್ಲಿಕಾ ಗಣೇಶ್ ಆಚಾರ್ಯ, ಉಪಾಧ್ಯಕ್ಷ ಪ್ರಸಾದ್ ಆಚಾರ್ಯ ಮೈಕೆ, ಮುತ್ತೂಟ್ ಫೈನಾನ್ಸಿನ ಪುತ್ತೂರು ಕ್ಲಸ್ಟರ್ ಮ್ಯಾನೇಜರ್ ಸಂದೇಶ್ ಶೇನೈ, ಪುತ್ತೂರು ಬ್ರಾಂಚ್ ಮ್ಯಾನೇಜರ್ ನವೀನ್ ಎ, ಪ್ರಸಾದ್ ಕುಮಾರ್ ಮ್ಯಾನೇಜರ್ ಸಿಎಸ್ ಆರ್ ಮಂಗಳೂರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಷಾ ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ರಮೇಶ್ ಸ್ವಾಗತಿಸಿ, ಗೌರವ ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿಯರು ಸಹಕರಿಸಿದರು.

- Advertisement -

Related news

error: Content is protected !!