Saturday, May 18, 2024
spot_imgspot_img
spot_imgspot_img

ಒಂದೇ ಕುಟುಂಬದ 9 ಜನರ ಶವ ಪತ್ತೆ: ಮೂಢನಂಬಿಕೆಗೆ ಮಾರುಹೋಗಿ ಕೊಲೆಯಾದ ಕುಟುಂಬಸ್ಥರು

- Advertisement -G L Acharya panikkar
- Advertisement -

ಮಹಾರಾಷ್ಟ್ರ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಮೈಸಾಳ ಗ್ರಾಮದಲ್ಲಿ ಒಂದೇ ಕುಟುಂಬದ 9 ಜನರ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಬಹಿರಂಗಕೊಂಡಿದೆ. 9 ಜನರ ಕೊಲೆಗೆ ಮೂಢನಂಬಿಕೆಯೇ ಕಾರಣವೆಂದು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಗೆಡಮ್ ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಮಿರಜ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೆಹಸಾಲ್ ಗ್ರಾಮದ ಮನೆಯಲ್ಲಿ 3 ದೇಹಗಳು ಒಂದೇ ಕಡೆ ಬಿದ್ದಿದ್ದವು. 6 ದೇಹಗಳು ಚೆಲ್ಲಾಪಿಲ್ಲಿಯಾಗಿದ್ದವು. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದರು. ಆದರೆ ಪ್ರಕರಣದ ತನಿಕೆಯನ್ನು ನಡೆಸಿದ ಪೊಲೀಸರಿಗೆ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ತಿಳಿದು ಬಂದಿದೆ.

ಅಬ್ಬಾಸ್ ಮೊಹಮ್ಮದ್ ಅಲಿ ಬಾಗವಾನ್ ಮತ್ತು ಧೀರಜ್ ಚಂದ್ರಕಾಂತ್ ಸುರವೇಶ್ ಶಂಕಿತ ಆರೋಪಿಗಳು ಹಣದ ಆಸೆಗಾಗಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಶಂಕಿತ ಆರೋಪಿಗಳು ಆಗಾಗ ವನಮೋರೆ ಕುಟುಂಬದಿಂದ ದೊಡ್ಡ ಮೊತ್ತದ ಹಣವನ್ನು ಪಡೆಯುತ್ತಿದ್ದರು ಎಂದು ತನಿಕೆ ವೇಳೆ ತಿಳಿದು ಬಂದಿದೆ. ತನಿಖೆ ವೇಳೆ ದೊರೆತ ಡೆತ್ ನೋಟ್ ನಲ್ಲಿ 25 ಜನರ ಮೇಲೆ ಹಣ ವರ್ಗಾವಣೆ ಮಾಡಿರುವ ಆರೋಪವಿದೆ.

ದುಷ್ಕರ್ಮಿಗಳು ವನಮೋರೆ ಕುಟುಂಬದವರಿಗೆ ಪದೇ ಪದೇ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಜೂನ್ 20ರ ರಾತ್ರಿ ಶಂಕಿತ ಆರೋಪಿಗಳು ರಹಸ್ಯವಾಗಿ ಹಣ ಪಡೆಯಲು ಮೈಸಾಳನಲ್ಲಿರುವ ವನಮೋರೆ ಮನೆಯಲ್ಲಿ ಪೂಜೆ ಮಾಡಿದ್ದಾರೆ. ಪೂಜೆಯ ವೇಳೆ ಎಲ್ಲರಿಗೂ ಪ್ರತ್ಯೇಕವಾಗಿ ವಿಷ ಕೊಟ್ಟು ಇಬ್ಬರೂ ಹೊರಟು ಹೋಗಿದ್ದಾರೆ. ಮಧ್ಯರಾತ್ರಿ ಸುಮಾರಿಗೆ ವನಮೊರೆ ಕುಟುಂಬದ 9 ಸದಸ್ಯರು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ.

ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾಗ ಸಾಂಗ್ಲಿ ಪೊಲೀಸರಿಗೆ ಮೊದಲು ಇದು ಆತ್ಮಹತ್ಯೆ ಎಂದು ತಿಳಿದು ಬಂದಿತ್ತು. ಒಂದು ಸುತ್ತಿನ ತನಿಖೆಯ ನಂತರ ಇದು ಆತ್ಮಹತ್ಯೆಯಲ್ಲ ಕೊಲೆ ಎಂಬುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಲ್ಲಾಪುರದಲ್ಲಿ ಮಂತ್ರವಾದಿ ಹಾಗೂ ಸಹಚರ ಬಂಧಿಸಲಾಗಿದೆ. ಬಂಧನ ನಂತರ ಗುಪ್ತವಾಗಿ ಇಬ್ಬರೂ ಮೋಸತನದಿಂದ ಆಗಾಗ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಘಟನೆ ನಡೆದ ದಿನ ಸೊಲ್ಲಾಪುರದ ಮಂತ್ರವಾದಿಯೊಬ್ಬರು ಪೂಜೆ ಸಲ್ಲಿಸಿ ವಿಷ ಕುಡಿಯಲು ನೀಡಿದ್ದರು ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!