Saturday, May 4, 2024
spot_imgspot_img
spot_imgspot_img

ಒಂದೇ ತಿಂಗಳ ಅವಧಿಯಲ್ಲಿ ದೇಶದಾದ್ಯಂತ 24 ಹುಲಿಗಳು ಬಲಿ

- Advertisement -G L Acharya panikkar
- Advertisement -

ವಿಶ್ವದಲ್ಲೇ ಅತ್ಯಂತ ಹೆಚ್ಚು ಹುಲಿಗಳನ್ನು ಹೊಂದಿದ ಭಾರತದಲ್ಲಿ ಹೊಸ ವರ್ಷ ಹುಲಿಗಳ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ಜನವರಿ 1ರಿಂದ ಫೆಬ್ರುವರಿ 8ರ ಅವಧಿಯಲ್ಲಿ ದೇಶಾದ್ಯಂತ 24 ಹುಲಿಗಳು ಮೃತಪಟ್ಟಿದ್ದಾಗಿ ವರದಿಗಳು ತಿಳಿಸಿದೆ. ಕಳೆದ ಮೂರು ವರ್ಷಗಳಲ್ಲೇ ಇಷ್ಟೊಂದು ದೊಡ್ಡ ಸಂಖ್ಯೆಯ ಹುಲಿಗಳು ಜನವರಿಯಲ್ಲಿ ಬಲಿಯಾಗಿರುವುದು ಇದೇ ಮೊದಲು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಂಕಿ ಅಂಶಗಳಿಂದ ಈ ಆಘಾತಕಾರಿ ವಿಷಯ ಬಹಿರಂಗವಾಗಿದೆ. ಕಳೆದ ವರ್ಷ ಇದೇ ವಧಿಯಲ್ಲಿ 16 ಹುಲಿಗಳು ಮೃತಪಟ್ಟಿದ್ದರೆ, 2021ರಲ್ಲಿ 20 ಹುಲಿಗಳು ಜೀವ ಕಳೆದುಕೊಂಡಿದ್ದವು.

ಉತ್ತರ ಪ್ರದೇಶದಲ್ಲಿ ಗರಿಷ್ಠ ಅಂದರೆ 9 ಹುಲಿಗಳು ಮೃತಪಟ್ಟಿವೆ. ಮಹಾರಾಷ್ಟ್ರ (6), ರಾಜಸ್ಥಾನ (3), ಕರ್ನಾಟಕ (2) ಉತ್ತರಾಖಂಡ (2) ಮತ್ತು ಕೇರಳ ಹಾಗೂ ಅಸ್ಸಾಂನಲ್ಲಿ ತಲಾ ಒಂದು ಹುಲಿಗಳು ಬಲಿಯಾಗಿವೆ.

- Advertisement -

Related news

error: Content is protected !!