Friday, March 29, 2024
spot_imgspot_img
spot_imgspot_img

ಒಣ ಕೆಮ್ಮು, ಕಫದಂತಹ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ..? ಈ ಮನೆಮದ್ದುಗಳನ್ನು ಅನುಸರಿಸಿ

- Advertisement -G L Acharya panikkar
- Advertisement -
vtv vitla
vtv vitla

ಚಳಿಗಾಲ ಆರಂಭವಾಗಿದ್ದು ಕೆಮ್ಮು, ನೆಗಡಿ, ಮುಂತಾದ ಸಮಸ್ಯೆಗಳು ಕಾಡುವುದು ಸಾಮಾನ್ಯ. ಕೆಮ್ಮಿನ ಬಗ್ಗೆ ಹೇಳುವುದಾದರೆ, ವಾತ, ಪಿತ್ತ ಮತ್ತು ಕಫದ ಅಸಮತೋಲನ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಎರಡು ವಿಧದ ಕೆಮ್ಮುಗಳಿವೆ. ಅದರಲ್ಲಿ ಒಂದು ಕಫದ ಕೆಮ್ಮು ಮತ್ತು ಇನ್ನೊಂದು ಒಣ ಕೆಮ್ಮು. ಒಣ ಕೆಮ್ಮಿನಲ್ಲಿ ಗಂಟಲು ನೋವು ಇರುತ್ತದೆ. ಕೆಮ್ಮು ಹೆಚ್ಚಾದಾಗ, ಪಕ್ಕೆಲುಬುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಇದು ಟಿಬಿಗೆ ಕಾರಣವಾಗುತ್ತದೆ. ಒಣ ಕೆಮ್ಮನ್ನು ಹೋಗಲಾಡಿಸಲು ಈ ಮನೆಮದ್ದುಗಳನ್ನು ಬಳಸಿ. ವಾಸ್ತವವಾಗಿ ಒಣ ಕೆಮ್ಮು ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಒಣ ಕೆಮ್ಮಿನಿಂದ ತೊಂದರೆಗೊಳಗಾಗಿದ್ದರೆ, ಇಲ್ಲಿ ತಿಳಿಸಲಾದ ಕೆಲವು ಮನೆಮದ್ದುಗಳು ನಿಮಗೆ ಉಪಯುಕ್ತವಾಗಬಹುದು.

vtv vitla
vtv vitla

ಬಿಸಿ ನೀರು ಮತ್ತು ಉಪ್ಪು
ಬಿಸಿ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಬಾಯಿ ಮುಕ್ಕಿಳಸುವುದರಿಂದ ಒಣ ಕೆಮ್ಮು ದೂರವಾಗುತ್ತದೆ. ಅಷ್ಟೇ ಅಲ್ಲ ಗಂಟಲಿನಲ್ಲಿ ಚುಚ್ಚುವಿಕೆಯಂತಹ ಸಮಸ್ಯೆಗಳನ್ನು ಇದು ತೆಗೆದುಹಾಕಲು ಉತ್ತಮವೆಂದು ಪರಿಗಣಿಸಲಾಗುತ್ತದೆ. ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪು ತೆಗೆದುಕೊಂಡು ಸುಮಾರು 10 ನಿಮಿಷಗಳ ಕಾಲ ಬಾಯಿ ಮುಕ್ಕಳಿಸಿ. ಕೆಮ್ಮು ಹೆಚ್ಚಾಗಿದ್ದರೆ ದಿನಕ್ಕೆ ಸುಮಾರು 3 ಬಾರಿ ಇದನ್ನು ಮಾಡಿ.

ಅರಿಶಿಣ ಮತ್ತು ಹಾಲು
ಅರಿಶಿಣವು ಅನೇಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಈ ಕಾರಣಕ್ಕಾಗಿ ಇದನ್ನು ಅನೇಕ ರೋಗಗಳ ತಡೆಗಟ್ಟುವಿಕೆಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಒಣ ಕೆಮ್ಮಿನ ಸಮಸ್ಯೆ ಇರುವಾಗ ರಾತ್ರಿ ಬೆಚ್ಚನೆಯ ಹಾಲಿಗೆ ಅರಿಶಿಣ ಬೆರೆಸಿ ಕುಡಿಯುವುದರಿಂದ ಪರಿಹಾರ ಸಿಗುತ್ತದೆ. ಇದು ನೈಸರ್ಗಿಕ ಪ್ರತಿಜೀವಕದಂತೆ ಕಾರ್ಯನಿರ್ವಹಿಸುತ್ತದೆ.

vtv vitla

ಜೇನುತುಪ್ಪ
ಒಣ ಕೆಮ್ಮಿನ ಚಿಕಿತ್ಸೆಗಾಗಿ ಜೇನುತುಪ್ಪವನ್ನು ಅತ್ಯುತ್ತಮ ಆಯ್ಕೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಬ್ಯಾಕ್ಟೀರಿಯಾಗಳು ಕೆಮ್ಮನ್ನು ಉಂಟುಮಾಡುವ ಸಾಧ್ಯತೆ ಹೆಚ್ಚು ಮತ್ತು ಜೇನುತುಪ್ಪವು ಈ ಸೂಕ್ಷ್ಮಾಣುಗಳನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಆದ್ದರಿಂದ, ಮಲಗುವ ಸಮಯದಲ್ಲಿ ಖಂಡಿತವಾಗಿಯೂ ಸ್ವಲ್ಪ ಜೇನುತುಪ್ಪವನ್ನು ಸೇವಿಸಿ. ಹೀಗೆ ಮಾಡುವುದರಿಂದ ಗಂಟಲಿನಲ್ಲಿ ತೇವಾಂಶವೂ ಸೇರಿ ಕೆಮ್ಮು ನಿವಾರಣೆಯಾಗುತ್ತದೆ.

vtv vitla
vtv vitla

ಸ್ಟೀಮ್​ ತೆಗೆದುಕೊಳ್ಳಿ
ಶೀತ ಅಥವಾ ಕೆಮ್ಮಿನಿಂದ ಪರಿಹಾರ ಪಡೆಯಲು ಸ್ಟೀಮ್​ ತೆಗೆದುಕೊಳ್ಳುವುದು ಉತ್ತಮ. ಅತಿಯಾದ ಕೆಮ್ಮಿನ ಸಂದರ್ಭದಲ್ಲಿ ದಿನಕ್ಕೆ ಎರಡು ಮೂರು ಬಾರಿ ಸ್ಟೀಮ್​ ತೆಗೆದುಕೊಳ್ಳಬೇಕು. ಇದು ಉತ್ತಮ ಮನೆಮದ್ದು ಮತ್ತು ಇದು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ.

suvarna gold
- Advertisement -

Related news

error: Content is protected !!