Thursday, May 2, 2024
spot_imgspot_img
spot_imgspot_img

ಕಟೀಲು ಕ್ಷೇತ್ರದ ಅರ್ಚಕರ ಮನೆ ದರೋಡೆ ಪ್ರಕರಣದ ಆರೋಪಿ ಅಪಘಾತದಲ್ಲಿ ಮೃತ್ಯು

- Advertisement -G L Acharya panikkar
- Advertisement -

ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ವಾಸುದೇವ ಆಸ್ರಣ್ಣ ಅವರ ಮನೆ ದರೋಡೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಎಕ್ಕಾರು ನಿವಾಸಿ ಸುಧೀರ್ ಭಟ್ ಮಧ್ಯಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ನಿಧನರಾಗಿದ್ದಾರೆ.

2019ರ ಅಕ್ಟೋಬರ್ 4ರಂದು ಮಧ್ಯ ರಾತ್ರಿಯ ಸಮಯ ಗಿಡಿಗೆರೆಯಲ್ಲಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಅಸ್ರಣ್ಣರ ಮನೆಗೆ ನುಗ್ಗಿದ್ದ ಸುಮಾರು ಎಂಟು ಮಂದಿ ದರೋಡೆಕೋರರ ತಂಡ ಮಾರಾಕಾಸ್ತ್ರಗಳನ್ನು ತೋರಿಸಿ ಮನೆಮನೆಯಲ್ಲಿದ್ದವರನ್ನು ಬೆದರಿಸಿ ನಗ ನಗದನ್ನು ದೋಚಿ ಪರಾರಿಯಾಗಿದ್ದ ರು.

ಈ ಪ್ರಕರಣದಲ್ಲಿ ಆರೋಪಿಗಳಲ್ಲಿ ಸುಧೀರ್ ಭಟ್ ಕೂಡ ಒಬ್ಬನಾಗಿದ್ದ. ಇದೀಗ ಇವರು ಮಧ್ಯಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

- Advertisement -

Related news

error: Content is protected !!