Sunday, June 7, 2026
spot_imgspot_img
spot_imgspot_img

ಕಾಸರಗೋಡು: ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಸ್ಕೂಟರ್; ಎಂಬಿಬಿಎಸ್ ವಿದ್ಯಾರ್ಥಿನಿ ಮೃತ್ಯು

- Advertisement -
- Advertisement -

ಕಾಸರಗೋಡು: ರಸ್ತೆಯ ಹೊಂಡದಲ್ಲಿ ಸಿಲುಕಿದ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಎಂಬಿಬಿಎಸ್ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಕಣ್ಣೂರು ಚೇಂಬರ್ ಆಫ್ ಕಾಮರ್ಸ್ ನ ಮಾಜಿ ಅಧ್ಯಕ್ಷ, ಕಣ್ಣೂರು ಸೈಂಟ್ ಮೈಕಲ್ ಶಾಲಾ ಸಮೀಪದ ಮಹೇಶ್ಚಂದ್ರ ಬಾಳಿಗಾರವರ ಪುತ್ರಿ ಶಿವಾನಿ ಬಾಳಿಗಾ (20) ಮೃತ ಪಟ್ಟ ವಿದ್ಯಾರ್ಥಿನಿ. ಮಣಿಪಾಲ ವಿಶ್ವ ವಿದ್ಯಾನಿಲಯದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದಳು.

ರವಿವಾರ ರಾತ್ರಿ ಏಳು ಗಂಟೆ ಸುಮಾರಿಗೆ ಕಾಸರಗೋಡು ಚಂದ್ರಗಿರಿ ರಸ್ತೆಯ ಪಿಲಿಕುಂಜೆ ಎಂಬಲ್ಲಿ ಅಪಘಾತ ನಡೆದಿತ್ತು. ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ರಸ್ತೆಯ ಹೊಂಡಕ್ಕೆ ಬಿದ್ದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಶಿವಾನಿ ಗಂಭೀರ ಗಾಯಾಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಸಂಜೆ ಮೃತ ಪಟ್ಟಿದ್ದಾರೆ. ಅಪಘಾತದ ಕುರಿತಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!