Saturday, May 4, 2024
spot_imgspot_img
spot_imgspot_img

ಕಟೀಲು ದೇವಳದಲ್ಲಿ 100 ರೂ ಕೊಟ್ಟರೆ ಶೀಘ್ರ ದೇವರ ದರ್ಶನ .!! ದುಡ್ಡಿಗಾಗಿ ತೆರೆಯುವ ವಿಶೇಷ ಬಾಗಿಲು..?

- Advertisement -G L Acharya panikkar
- Advertisement -

ಮಂಗಳೂರು: ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇದೀಗ ಶೀಘ್ರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, 100 ರೂಪಾಯಿ ಹಣ ನೀಡಿ ಈ ವ್ಯವಸ್ಥೆಯನ್ನು ಭಕ್ತರು ಪಡೆಯಬಹುದಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ರಾಜ್ಯದ ಕೆಲವು ದೇವಸ್ಥಾನಗಳಲ್ಲಿ ಹಣ ನೀಡಿ ವಿಶೇಷ ಸಾಲಿನ ಮೂಲಕ ದೇವರ ದರ್ಶನದ ವ್ಯವಸ್ಥೆಯನ್ನು ಮಾಡಿಕೊಂಡಿವೆ. ಕರಾವಳಿಯ ಪ್ರಸಿದ್ದ ದೇವಿ ಕ್ಷೇತ್ರ ವಾದ ಕಟೀಲಿನಲ್ಲಿ ಇತ್ತೀಚಿನ ದಿನಗಳವರೆಗೂ ಈ ರೀತಿಯ ಯಾವುದೇ ವ್ಯವಸ್ಥೆ ಇದ್ದಿಲ್ಲ. ಆದರೆ ಕ್ಷೇತ್ರದಲ್ಲಿ ಇದೀಗ ಶೀಘ್ರ ದರ್ಶನ ವ್ಯವಸ್ಥೆಯನ್ನು ಜಾರಿ ಮಾಡಲಾಗಿದ್ದು, ಶೀಘ್ರ ದರ್ಶನ ಪಡೆಯುವ ಪ್ರತಿಯೋರ್ವ ಭಕ್ತನು ನೂರು ರೂಪಾಯಿ ಪಾವತಿಸಿ ದೇವಸ್ಥಾನದ ಒಳಗೆ ಪ್ರವೇಶ ಮಾಡಬಹುದಾಗಿದೆ.

ನವರಾತ್ರಿಯ ಬಳಿಕ ಈ ಹೊಸ ನಿಯಮವನ್ನು ಕ್ಷೇತ್ರದಲ್ಲಿ ತರಲಾಗಿದೆ. ಸಾವಿರಾರು ಭಕ್ತರು ಸೇರಿದರೂ ಯಾವುದೇ ಗೊಂದಲ, ನೂಕು ನುಗ್ಗಲು ಆಗದಂತೆ ನಡೆಯುತ್ತಿದ್ದ ವ್ಯವಸ್ಥೆಗೆ ಈಗ ಶೀಘ್ರ ದರ್ಶನ ಎಂಬುದನ್ನು ಸೇರಿಸಿ ನೂರು ರೂಪಾಯಿ ಮೊತ್ತ ಹಾಕಲಾಗುತ್ತಿದೆ.

ಈ ಹಿಂದೆ ಪಾರ್ಕಿಂಗ್ ಮೊತ್ತವನ್ನು ಹಾಕಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನ ಮಾಡಿತ್ತು. ಈ ನಿಯಮಕ್ಕೆ ಕ್ಷೇತ್ರದ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಭಕ್ತರ ವಿರೋಧ ಹಿನ್ನಲೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಈ ನಿರ್ಧಾರವನ್ನು ಹಿಂಪಡೆದಿತ್ತು. ಶುಕ್ರವಾರ ಅತೀ ಹೆಚ್ಚು ಭಕ್ತರು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸುತ್ತಾರೆ. ರಜಾದಿನದಲ್ಲೂ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತದೆ‌. ಹೀಗಾಗಿ ಹಲವು ಭಕ್ತರಿಗೆ ಸರತಿಸಾಲಿನಲ್ಲಿ‌ ನಿಂತು ದರ್ಶನ ಪಡೆಯಲು ಸಾಧ್ಯವಾಗದ ಕಾರಣ ಶೀಘ್ರ ದರ್ಶನ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ವಾದವಾಗಿದೆ.

astr
- Advertisement -

Related news

error: Content is protected !!