Friday, April 26, 2024
spot_imgspot_img
spot_imgspot_img

ಕಡಬ: ಅಪ್ರಾಪ್ತ ಯುವತಿಯ ಮಾನಭಂಗಕ್ಕೆ ಯತ್ನ; ಪ್ರಕರಣ ದಾಖಲು.!!

- Advertisement -G L Acharya panikkar
- Advertisement -
vtv vitla
vtv vitla

ಕಡಬ: ಅಪ್ರಾಪ್ತ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಮಾನಭಂಗಕ್ಕೆ ಯತ್ನಿಸಿದ ವ್ಯಕ್ತಿ ಹಾಗೂ ಯುವತಿಗೆ ಹಲ್ಲೆ ಮಾಡಿದ ಆರೋಪದಡಿ ಆತನ ಪತ್ನಿಯ ವಿರುದ್ದ ಕಡಬ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಯುವತಿಯು ತೋಟದಲ್ಲಿ ನೀರು ಹಾಯಿಸುವ ಸಲುವಾಗಿ ಸ್ಪಿಂಕ್ಲರ್ ಸೆಟ್ ಮಾಡುತ್ತಿದ್ದ ವೇಳೆ ಆಕೆಯ ಮಾವನ ಮಗ ಜಾನ್ ಎಂಬಾತ ಬಂದು ತಲೆಗೆ ಕೈಯಿಂದ ಹೊಡೆದು “ನಾನು ರೇಪ್ ಮಾಡುತ್ತೇನೆಂದು ನೀನು ಪ್ರಚಾರ ಪಡಿಸಿದ್ದು, ಈಗ ರೇಪ್ ಮಾಡಿ ತೋರಿಸುತ್ತೇನೆ” ಎಂದು ಹೇಳಿ ಪ್ಯಾಂಟ್ ಜಾರಿಸಲು ಯತ್ನಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಸುದ್ದಿ ತಿಳಿದು ತೋಟಕ್ಕೆ ಬಂದಿದ್ದ ಯುವತಿಯ ಅಜ್ಜಿಗೂ ಆರೋಪಿ ಹಲ್ಲೆ ಮಾಡಿದಲ್ಲದೆ, ಆರೋಪಿಯ ಪತ್ನಿ ಜೆನ್ಸಿಯೂ ಯುವತಿಗೆ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸದ್ಯ ಯುವತಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ದೂರಿನ ಆಧಾರದಲ್ಲಿ ಕಡಬ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

vtv vitla
vtv vitla
- Advertisement -

Related news

error: Content is protected !!