- Advertisement -
- Advertisement -
ಕಡಬ: ಹೆರಿಗೆ ವೇಳೆ ಅಧಿಕ ರಕ್ತಸ್ರಾವಕ್ಕೆ ಒಳಗಾಗಿ ಕಡಬದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳೂರಿನ ಲೇಡಗೋಷನ್ ಆಸ್ಪತ್ರೆಯಲ್ಲಿ ನಡೆದಿದೆ.

ಕಡಬ ತಾಲೂಕು ಕೊಂಬಾರು ಗ್ರಾಮದ ಇಡ್ಯಡ್ಕ ಕಟ್ಟೆ ಚೇತನ್ ಎಂಬವರ ಪತ್ನಿ ವಿದ್ಯಾ (30) ಮೃತ ಮಹಿಳೆ.

ಮಂಗಳೂರಿನ ಲೇಡಿಗೋಷನ್ ಅಸ್ಪತ್ರೆಯಲ್ಲಿ ಅವಳಿ ಹೆರಿಗೆ ಆಗಿ ವಿಪರೀತ ರಕ್ತಸ್ರಾವದಿಂದ ಜು.14ರ ಮುಂಜಾನೆ ಮಹಿಳೆ ಮೃತಪಟ್ಟಿದ್ದಾರೆ.

ಮೊದಲು ಎರಡು ಹೆಣ್ಣು ಮಕ್ಕಳಿದ್ದು, ಈಗ ಎರಡು ಅವಳಿ ಹೆಣ್ಣು ಮಕ್ಕಳ ಜನನ ಸಂದರ್ಭ ವಿಪರೀತ ರಕ್ತಸ್ರಾವಕ್ಕೆ ಒಳಗಾಗಿ ಮೃತಪಟ್ಟಿರುತ್ತಾರೆ.

ಮೃತರು ಚಾರ್ವಾಕ ಶಾಲಾ ಹಿರಿಯ ವಿದ್ಯಾರ್ಥಿನಿಯಾಗಿದ್ದು, ಚಾರ್ವಾಕ ಇಡ್ಯಡ್ಕ ನಿವಾಸಿಯಾಗಿದ್ದ ವಿದ್ಯಾರನ್ನು ಕೊಂಬಾರಿನ ಚೇತನ್ ಎಂಬವರಿಗೆ ಮದುವೆ ಮಾಡಿ ಕೊಡಲಾಗಿತ್ತು.


- Advertisement -