Thursday, June 18, 2026
spot_imgspot_img
spot_imgspot_img

ಕಡಬ: ಜಾಗದ ವಿಚಾರವಾಗಿ ಹಲ್ಲೆ ಆರೋಪ; ಸೈನಿಕನ ಪತ್ನಿ, ಮಗ, ಮಾವ ಆಸ್ಪತ್ರೆಗೆ ದಾಖಲು

- Advertisement -
- Advertisement -
vtv vitla

ಕಡಬ: ಜಾಗದ ವಿಚಾರದಲ್ಲಿ ಪಕ್ಕದ ಮನೆಯವರು ಹಲ್ಲೆ ಮಾಡಿರುವುದಾಗಿ ಆರೋಪಿಸಿ ಮೂವರು ಆಸ್ಪತ್ರೆಗೆ ದಾಖಲಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕಲ್ಲುಗುಡ್ಡೆಯಲ್ಲಿ ನಡೆದಿದೆ. ಆರ್ಲ ನಿವಾಸಿ ಸೈನಿಕ ಅಝೀಝ್ ಅವರ ಪತ್ನಿ ಫೌಝಿಯಾ, ಪುಟ್ಟ ಮಗ ಹಾಗೂ ಫೌಝಿಯಾ ತಂದೆ ಹಲ್ಲೆಗೊಳಗಾದವರು.

ಕಲ್ಲುಗುಡ್ಡೆಯಲ್ಲಿ ತಂದೆಯ ಮನೆಗೆ ಫೌಝಿಯಾ ಹೋಗಿದ್ದರು. ಈ ವೇಳೆ ನೆರೆಯ ಮನೆಯ ನಾಲ್ವರು ಜಾಗದ ವಿಚಾರದಲ್ಲಿ ಜಗಳಕ್ಕೆ ಬಂದಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಇದೇ ವೇಳೆ ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ. ಈ ವೇಳೆ ನಾಲ್ವರು ಫೌಝಿಯಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ವೇಳೆ ಪೌಝಿಯಾ ಅವರ ತಂದೆಯ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಿ ದಿನವೂ ಪುಂಡರ ಗ್ಯಾಂಗ್ ಜಾಗದ ವಿಚಾರದಲ್ಲಿ ಗಲಾಟೆಗೆ ಮುಂದಾಗುತ್ತಿತ್ತು ಎಂದು ತಿಳಿದು ಬಂದಿದೆ. ಸದ್ಯ ಗಾಯಾಳುಗಳನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Related news

error: Content is protected !!