Sunday, August 9, 2026
spot_imgspot_img
spot_imgspot_img

ಕಡಬ: ಜುಗಾರಿ ಅಡ್ಡೆಗೆ ಪೊಲೀಸರಿಂದ ದಾಳಿ; ವಾಹನ, ನಗದು ಸಹಿತ ಮೂವರು ವಶಕ್ಕೆ

- Advertisement -
- Advertisement -

ಕಡಬ: ಆಲಂಕಾರು ಗ್ರಾಮದ ನಾಡ್ತಿಲ ಸರಕಾರಿ ಗುಡ್ಡದಲ್ಲಿ ಜುಗಾರಿ ಆಟ ಆಡುತ್ತಿದ್ದ ವೇಳೆ ದಾಳಿ ನಡೆಸಿದ ಕಡಬ ಪೋಲೀಸರು ಮೂರು ಮಂದಿ ಹಾಗೂ ವಾಹನ, ನಗದನ್ನು ವಶಕ್ಕೆ ಪಡೆದುಕೊಂಡ ಘಟನೆ ಜು.24ರಂದು ನಡೆದಿದೆ.

ಸಂತೋಷ್ ಗುರಿಯಡ್ಕ,ರಘುರಾಮ ಶರವೂರು,ಮಂಜುನಾಥ ಬೇಳ್ವಾಡಿ, ಬಂಧಿತರು.ಈ ಸಂದರ್ಭದಲ್ಲಿ ಹಲವಾರು ಮಂದಿ ಪರಾರಿಯಾಗಿದ್ದಾರೆ. ಜುಗಾರಿ ನಿರತ ಸ್ಥಳದಿಂದ 5 ಮೋಟಾರ್ ಸೈಕಲ್,ಒಂದು ಅಟೋ ರಿಕ್ಷಾ ಹಾಗೂ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಕಡಬ ಠಾಣಾ ಎಸ್.ಐ. ಆಂಜನೇಯ ರೆಡ್ಡಿ, ಎಚ್.ಸಿ.ಗಳಾದ ಭವಿತ್ ರೈ, ಹರೀಶ್, ರಾಜು, ಪಿಸಿ ಚಂದನ್ ಕುಮಾರ್ ವಾಹನ ಚಾಲಕ ನಾರಾಯಣ ಪಾಟಾಳಿ ಪಾಲ್ಗೊಂಡಿದ್ದರು. ಬಂಧಿತರ ವಿವರ ಲಭ್ಯವಾಗಿಲ್ಲ.

- Advertisement -

Related news

error: Content is protected !!