Friday, April 19, 2024
spot_imgspot_img
spot_imgspot_img

ಕಡಬ: ನೆಕ್ಕಿತ್ತಡ್ಕ ದರ್ಗಾದ ಬೀಗ ಮುರಿದು ಹಣ ಎಗರಿಸಿದ ಖದೀಮರು; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

- Advertisement -G L Acharya panikkar
- Advertisement -
vtv vitla
vtv vitla

ಕಡಬ: ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿ ದರ್ಗಾದ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ದರ್ಗಾದ ಒಳಗಿದ್ದ ಹಣವನ್ನು ಕಳ್ಳತನ ಮಾಡಿದ ಘಟನೆ ಜ. 30ರಂದು ಮಧ್ಯರಾತ್ರಿ ನಡೆದಿದೆ.

ಭಾನುವಾರ ರಾತ್ರಿ ಸುಮಾರು 3 ಗಂಟೆಯ ಹೊತ್ತಿಗೆ ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ದರ್ಗಾದ ಬೀಗವನ್ನು ಮುರಿದು ಒಳನುಗ್ಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ದರ್ಗಾದ ಕಬ್ಬಿಣದ ಬಾಗಿಲಿಗೆ 2 ಬೀಗಗಳನ್ನು ಹಾಕಲಾಗಿದ್ದು, ಒಂದು ಬೀಗವನ್ನು ಮುರಿದಿರುವ ಕಳ್ಳರು, ಎರಡನೇ ಬೀಗವನ್ನು ಮುರಿಯಲಾಗದ ಕಾರಣ ಬಾಗಿಲಿನ ಚಿಲಕವನ್ನೇ ಮುರಿದಿದ್ದಾರೆ. ದರ್ಗಾದಲ್ಲಿದ್ದ ಸುಮಾರು 30 ಸಾವಿರಕ್ಕೂ ಹೆಚ್ಚಿನ ಹಣವನ್ನು ಕಳ್ಳರು ಎಗರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

vtv vitla
vtv vitla
- Advertisement -

Related news

error: Content is protected !!