Sunday, May 5, 2024
spot_imgspot_img
spot_imgspot_img

ಕಡಬ: ಪತಿಯ ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ..!

- Advertisement -G L Acharya panikkar
- Advertisement -
vtv vitla
vtv vitla
vtv vitla

ಕಡಬ: ಪತಿಯ ಕಿರುಕುಳದಿಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಠಾಣಾ ವ್ಯಪ್ತಿಯ ಕೊಯಿಲ ಗ್ರಾಮದ ಪಟ್ಟೆ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಪಟ್ಟೆ ನಿವಾಸಿ ಅಂಗಾರ ಎಂಬವರ ಪತ್ನಿ ಹರಿಣಿ (41) ಎನ್ನಲಾಗಿದೆ.

ಮಧ್ಯಾಹ್ನ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮಹಿಳೆ ಮನೆಯೊಳಗಿನ ಕೋಣೆಯಲ್ಲಿ ಛಾವಣಿಯ ಬಿದಿರಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

vtv vitla

ಇವರ ಪತಿ ಅಂಗಾರ ವಿಪರೀತ ಮದ್ಯಪಾನ ಸೇವನೆಯ ಚಟ ಹೊಂದಿದ್ದಲ್ಲದೇ ಪತ್ನಿಗೆ ದೈಹಿಕ ಹಿಂಸೆಯನ್ನು ಕೂಡಾ ನೀಡುತ್ತಿದ್ದರು ಎನ್ನಲಾಗಿದೆ. ಇದನ್ನು ಸಹಿಸದ ಹರಿಣಿ ಎರಡು ವರ್ಷಗಳಿಂದ ತವರು ಮನೆ ಪರ್ಲಡ್ಕದ ಕೋಡಿಬಾಲ್ ನಲ್ಲಿ ವಾಸವಾಗಿದ್ದರು.

ಆದರೆ ಇತ್ತೀಚೆಗೆ ಮತ್ತೆ ಗಂಡನೊಂದಿಗೆ ವಾಸ ಮಾಡಿಕೊಂಡಿದ್ದು ಮತ್ತೆ ಪತಿಯ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತಳ ಸಹೋದರ ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಕಡಬ ಪೋಲೀಸರು ಪ್ರಕರಣ ದಾಖಲಾಗಿದೆ.

vtv vitla
vtv vitla
vtv vitla
- Advertisement -

Related news

error: Content is protected !!