Wednesday, June 17, 2026
spot_imgspot_img
spot_imgspot_img

ಕುಂದಾಪುರ: ತಾಯಿಯನ್ನು ಹೊಡೆದು ಕೊಂದ ಮಗ; ಸಹೋದರಿಯಿಂದ ದೂರು

- Advertisement -
- Advertisement -

ಕುಂದಾಪುರ: ತನ್ನ ತಾಯಿಯನ್ನು ಸಹೋದರ ಹೊಡೆದು ಕೊಂದಿರುವುದಾಗಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.

ಹಾಲಾಡಿ ಗ್ರಾಮದ ಕಸಡಿ ಕರಿಮನೆ ನಿವಾಸಿ ಕೃಷ್ಣಾ ನಾಯ್ಕ ಎಂಬುವರು ಪಾರ್ವತಿ (47) ಅವರನ್ನು ಥಳಿಸಿ ಕೊಂದಿದ್ದಾರೆ ಎಂದು ಶ್ರೀಮತಿ ನಾಯ್ಕ (30) ಅವರು ದೂರಿನಲ್ಲಿ ತಿಳಿಸಿದ್ದಾರೆ.

ಶ್ರೀಮತಿ ನಾಯ್ಕ ಹೇಳುವ ಪ್ರಕಾರ, ಆರೋಪಿ ಕೃಷ್ಣಾನಾಯ್ಕ ತನ್ನ ತಾಯಿ ಪಾರ್ವತಿ ನಾಯ್ಕನಿಗೆ ಆಗಾಗ ಥಳಿಸುತ್ತಿದ್ದ. ಸೆಪ್ಟೆಂಬರ್ 18ರಂದು ಕೂಡ ಆತ ತನ್ನ ತಾಯಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದ. ಆಗ ತನ್ನ ತಾಯಿ ಮನೆಯೊಳಗಿದ್ದ ರುಬ್ಬುವ ಕಲ್ಲಿನ ಮೇಲೆ ಬಿದ್ದಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪಾರ್ವತಿಯನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಸೆಪ್ಟೆಂಬರ್ 22ರಂದು ಆಕೆ ಸಾವನ್ನಪ್ಪಿದ್ದಾಳೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!