Thursday, October 1, 2026
spot_imgspot_img
spot_imgspot_img

ಕಡಬ: ಪೆರಿಯಶಾಂತಿಯಲ್ಲಿ ಆನೆ ಪ್ರತ್ಯಕ್ಷ..! ಅಪಾಯದಿಂದ ಪಾರಾದ ಬೈಕ್ ಸವಾರರು

- Advertisement -
- Advertisement -

ಕಡಬ: ಏಕಾಏಕಿಯಾಗಿ ಪೆರಿಯಶಾಂತಿಯ ಇಚಿಲಂಪಾಡಿಯ ರಸ್ತೆ ಬದಿಯಲ್ಲಿ ಕಾಡಾನೆಯೊಂದು ಪ್ರತ್ಯಕ್ಷಗೊಂಡಿದ್ದು, ಬೈಕ್ ಸವಾರರಿಬ್ಬರು ಅಪಾಯದಿಂದ ಪಾರಾದ ಘಟನೆ ಸಂಭವಿಸಿದೆ.

ಕುಟ್ರುಪ್ಪಾಡಿ ಗ್ರಾಮದ ಬಜೆತ್ತಡ್ಕ ನಿವಾಸಿ ಧರ್ಮಪಾಲ ಹಾಗೂ ರಮೇಶ್ ಎಂಬವರು ಕೊಕ್ಕಡದ ಸಂಬAಧಿಕರ ಮನೆಗೆಂದು ಇಚಿಲಂಪಾಡಿ ಮೂಲಕ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಕಾಡಾನ ರಸ್ತೆ ದಾಟಿದ್ದು, ದಿಕ್ಕು ತೋಚದ ಬೈಕ್ ಸವಾರರು ಹಠಾತ್ ಬ್ರೇಕ್ ಹಾಕಿ ಅಲ್ಲಿಂದ ಅರ್ಧ ಕಿ.ಮೀ ದೂರ ಓಡಿ ಹೋಗಿದ್ದಾರೆ. ಬೈಕ್ ಕಂಡು ಅಲ್ಲಿ ಜನ ನೆರೆದಿದ್ದು, ಬೈಕನ್ನು ಎತ್ತಿ ಸಹಕರಿಸಿದ್ದಾರೆ. ಘಟನೆಯಲ್ಲಿ ಓರ್ವ ಸವಾರನ ಕಾಲಿಗೆ ಸಣ್ಣ ಗಾಯವಾಗಿದ್ದು, ಸಹ ಸವಾರನ ಕೈಗೆ ಪರಚಿದ ಗಾಯವಾಗಿದೆ.

- Advertisement -

Related news

error: Content is protected !!