Tuesday, June 23, 2026
spot_imgspot_img
spot_imgspot_img

ಕಡಬ: ಹೊಳೆ ದಾಟುತ್ತಿದ್ದಾಗ ತೆಪ್ಪ ಮಗುಚಿ ಮಹಿಳೆ ದುರ್ಮರಣ

- Advertisement -
- Advertisement -

ಕಡಬ: ಕುಮಾರಧಾರಾ ನದಿಯಲ್ಲಿ ತೆಪ್ಪ ಮಗುಚಿ ಮಹಿಳೆಯೊಬ್ಬರು ಮೃತ ಪಟ್ಟ ಘಟನೆ ನಡೆದಿದೆ. ಕೊಯಿಲ ಗ್ರಾಮದ ಏಣಿತ್ತಡ್ಕ ಎಂಬಲ್ಲಿ ಘಟನೆ ನಡೆದಿದೆ. ಏಣಿತ್ತಡ್ಕ ನಿವಾಸಿ ಬಾಳಪ್ಪ ನಾಯ್ಕ ಎಂಬುವವರ ಪತ್ನಿ ಗೀತಾ(46) ಅಸುನೀಗಿದ ದುರ್ದೈವಿ.

ಕುಮಾರಧಾರಾ ಹೊಳೆಯ ಇನ್ನೊಂದು ಬದಿಯಲ್ಲಿರುವ ಅರೆಲ್ತಡ್ಕಯಿಂದ ಹುಲ್ಲು ಸಂಗ್ರಹಿಸಿ ಪ್ಲಾಸ್ಟಿಕ್ ಗೋಣಿಚೀಲದಲ್ಲಿ ತುಂಬಿಸಿಕೊಂಡು ಹೊಳೆಯನ್ನು ತೆಪ್ಪದ ಮುಖಾಂತರ ದಾಟುತ್ತಿದ್ದರು. ನದಿಯ ಮಧ್ಯಭಾಗಕ್ಕೆ ಬಂದಾಗ ಜೋರಾದ ಗಾಳಿ ಬೀಸಿ ತೆಪ್ಪ ಮಗುಚಿ ಬಿದ್ದಿದೆ. ತೆಪ್ಪದಲ್ಲಿದ್ದ ಇನ್ನಿಬ್ಬರು ಮಹಿಳೆಯರು ಹುಲ್ಲು ತುಂಬಿದ್ದ ಗೋಣಿಚೀಲದ ಸಹಾಯದಿಂದ ಈಜಿ ದಡ ಸೇರಿದ್ದಾರೆ.

ಆದರೆ ಗೀತಾ ನೀರಿನಲ್ಲಿ ಮುಳುಗಿದ್ದಾರೆ. ವಿಷಯ ತಿಳಿದು ನೀರಿಗಿಳಿದ ಸ್ಥಳೀಯರು ಹುಡುಕಾಡಿದಾಗ ಅದಾಗಲೇ ಮೃತಪಟ್ಟಿದ್ದರು. ಕಡಬ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರೀಶಿಲನೆ ನಡೆಸಿದ್ದಾರೆ. ಮೃತರ ಪತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!