Saturday, April 27, 2024
spot_imgspot_img
spot_imgspot_img

ಕಡಬ: ಹೊಸ್ಮಠ-ಬಲ್ಯ 26ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ- ಮೊಸರು ಕುಡಿಕೆ ಉತ್ಸವ

- Advertisement -G L Acharya panikkar
- Advertisement -

ಕಡಬ: ಶ್ರೀಕೃಷ್ಣಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಹೊಸ್ಮಠ-ಬಲ್ಯದ ವತಿಯಿಂದ 26ನೇ ವರ್ಷದ ಮೊಸರುಕುಡಿಕೆ ಉತ್ಸವವು ಹೊಸ್ಮಠ ಅಯ್ಯಪ್ಪ ಭಜನಾ ಮಂದಿರದಲ್ಲಿ ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಪುತ್ತಿಲ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.ಶ್ರೀ ಕೃಷ್ಣ ಜನ್ಮಾಷ್ಟಮಿ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಕೊಲ್ಲಿಮಾರು ಶುಭ ಹಾರೈಸಿದರು. ಬಳಿಕ ಗ್ರಾಮದ ಹಿಂದೂ ಬಾಂಧವರ ಕ್ರೀಡಾಕೂಟ, ಪುಟಾಣಿಗಳ ಮುದ್ದು ಕೃಷ್ಣ ವೇಷ, ವಿಶೇಷ ಕ್ರೀಡಾಕೂಟಗಳ ಸಹಿತ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ಸುಳ್ಯದ ಧಾರ್ಮಿಕ ಮುಖಂಡರಾದ ರಾಜೇಶ್ ಮೇನಾಲ ಧಾರ್ಮಿಕ ಉಪನ್ಯಾಸವನ್ನು ನೀಡಿ, ಕೋಶಾಧಿಕಾರಿ ಪೂರ್ಣೇಶ್ ಗೌಡ ಬಾಬ್ಲುಬೆಟ್ಟು ಶುಭ ಹಾರೈಸಿದರು. ಬಳಿಕ ಡ್ರಾಮಾ ಜೂನಿಯರ್ ನಲ್ಲಿ ದ್ವಿತೀಯ ಸ್ಥಾನ ಪಡೆದ ಗ್ರಾಮೀಣ ಪ್ರತಿಭೆ ವೇದಿಕ್ ಕೌಶಲ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸ್ಪರ್ಧೆಗಳ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಕುಟ್ರುಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆಯಾದ ವಾಣಿ ನಾಗೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಗೌಡ ಎ., ಪಂಚಾಯತ್ ಸದಸ್ಯರುಗಳಾದ ಮೋಹಿನಿ ಪಡ್ನೂರು, ಸುಮನಾ ಹೊಸ್ಮಠ,ಬಲ್ಯ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿಯಾದ ಪುಷ್ಪ ಕೆ., ಉಪಸ್ಥಿತರಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿದರು.

ಉತ್ಸವ ಸಮಿತಿ ಗೌರವಾಧ್ಯಕ್ಷರಾದ ರೇಜಯ್ಯ ದೇವಾಡಿಗ, ಅಧ್ಯಕ್ಷರಾದ ದೇಜಪ್ಪ ಸಂಪಡ್ಕ,ಉಪಾಧ್ಯಕ್ಷ ಬಾಲಕೃಷ್ಣ ಗೌಡ ದೇರಾಜೆ,ಕಾರ್ಯದರ್ಶಿ ತುಕಾರಾಮ ಹೊಸ್ಮಠ, ಜತೆ ಕಾರ್ಯದರ್ಶಿ ಪ್ರಸಾದ್,ಗ್ರಾಮ ಪಂಚಾಯತ್ ಸದಸ್ಯ ಭಾಸ್ಕರ ಸನಿಲ, ಮಾಜಿ ಪಂಚಾಯತ್ ಅಧ್ಯಕ್ಷರುಗಳಾದ ಕೃಷ್ಣಪ್ಪ ದೇವಾಡಿಗ ಸನಿಲ, ದೇವಯ್ಯ ಗೌಡ ಪನ್ಯಾಡಿ ಸಮಿತಿಯ ಪೂರ್ವಾಧ್ಯಕ್ಷರುಗಳ ಸಹಿತ ಊರ ಪರವೂರ ಹಲವು ಗಣ್ಯರು ಉಪಸ್ಥಿತರಿದ್ದರು.

ವೆಂಕಟರಮಣ ಗೌಡ ದೇರಾಜೆ,ಮೋಹನ್ ಡಿ.ಬಿ ದೇರಾಜೆ ಸ್ವಾಗತಿಸಿ,ಶಿಕ್ಷಕ ಶೇಖರ ಗೌಡ ಪನ್ಯಾಡಿ, ನಾರಾಯಣ ಗೌಡ ಕೊಲ್ಲಿಮಾರು, ಜಾಕಿ ಉಮೇಶ್ ಬಂಗೇರ ಕಾರ್ಯಕ್ರಮವನ್ನು ನಿರೂಪಿಸಿ, ಕೋಶಾಧಿಕಾರಿ ಪೂರ್ಣೇಶ್ ಗೌಡ ಬಾಬ್ಲುಬೆಟ್ಟು ವಂದಿಸಿದರು.

- Advertisement -

Related news

error: Content is protected !!