Thursday, April 25, 2024
spot_imgspot_img
spot_imgspot_img

ಕನ್ಯಾನ: ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ; C.I.D ತನಿಖೆಗೆ ಆಗ್ರಹಿಸಿ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ವಿ.ಹಿಂ.ಪ. ಬಜರಂಗದಳ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

- Advertisement -G L Acharya panikkar
- Advertisement -

ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ಸುಮಾರು 20 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಸಂಜೀವರವರ ಮಗಳಾದ 9ನೇ ತರಗತಿ ಕಲಿಯುತ್ತಿದ್ದ ಅಪ್ರಾಪ್ತ ವಯಸ್ಕ ಹುಡುಗಿಯನ್ನು ಸಾಹುಲ್ ಹಮೀದ್ ಎನ್ನುವ ಮತಾಂದ ಕಪಟಿ ಪ್ರೀತಿಯ ನಾಟಕವಾಡಿ, ಆಮಿಷಗಳನ್ನು ಒಡ್ಡಿ ಮೇ.4ರಂದು ಅತ್ಯಾಚಾರ ಮಾಡಿ, ಹತ್ಯೆ ಮಾಡಿ ಅದನ್ನು ಅಪರಾದ ಸಂಖ್ಯೆ 0068/2022 ವಿಟ್ಲ ಪೋಲೀಸ್ ಠಾಣೆ ದ.ಕ, ಆತ್ಮಹತ್ಯೆ ಎಂದು ಬಿಂಬಿಸಿದೆ. ಶವದ ಕಾಲುಗಳು ನೆಲಕ್ಕೆ ತಾಗಿಕೊಂಡು ಇದ್ದು ಕೊರಳ ಬದಿಯಲ್ಲಿ ಆಳವಾದ ಗಾಯವಿದ್ದು ಇದು ಅತ್ಯಚಾರ ಮತ್ತು ಹತ್ಯೆ ಎಂಬುದನ್ನು ಸಾಬೀತು ಪಡಿಸುತ್ತದೆ.

ಆದ್ದರಿಂದ ಇದು ಲವ್ ಜಿಹಾದ್ ಒಂದು ಭಾಗವಾಗಿದ್ದು, ಸದ್ರಿ ಪ್ರಕರಣವನ್ನು C.I.D ತನಿಖೆಗೆ ಒಳಪಡಿಸಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಹಾಗೂ ಸದ್ರಿ ಕುಟುಂಬಕ್ಕೆ 10 ಲಕ್ಷ ರೂ. ಗಳ ಪರಿಹಾರ ಒದಗಿಸಿ ಕೊಡುವಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ನಿಯೋಗ ವತಿಯಿಂದ ಪುತ್ತೂರುನಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವರಾದ ಸುನೀಲ್ ಕುಮಾರ್ ಇವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತ್ತಡ್ಕ,ಜಿಲ್ಲಾ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸನ್ನ, ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ,ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ಜೀತೆಶ್ ಬಲ್ನಾಡ್,ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡ ಅಧ್ಯಕ್ಷರಾದ ಪದ್ಮನಾಭ ಕಟ್ಟೆ, ಬಜರಂಗದಳ ಪ್ರಖಂಡ ಸಂಚಾಲಕ್ ಚಂದ್ರಹಾಸ ಕನ್ಯಾನ ಹಾಗೂ ಮೃತ ಬಾಲಕಿಯ ಪೋಷಕರು ಉಪಸ್ಥಿತರಿದ್ದರು.

vtv vitla
vtv vitla
- Advertisement -

Related news

error: Content is protected !!