Friday, May 17, 2024
spot_imgspot_img
spot_imgspot_img

ಕನ್ಯಾನ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ

- Advertisement -G L Acharya panikkar
- Advertisement -

ಕನ್ಯಾನ – ಕನ್ಯಾನ ಹಾಲು ಉತ್ಪಾದಕರ ಸಹಕಾರ ಸಂಘ ದ ವಾರ್ಷಿಕ ಸಾಮಾನ್ಯ ಸಭೆ ಸಂಘದ “ಕ್ಷೀರ ಸೌಧ ಸಹಕಾರ ಸಭಾಭವನ” ದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಸ್ಥಾಪಕ ಹಾಗೂ ಪ್ರಸ್ತುತ ಅಧ್ಯಕ್ಷರಾಗಿರುವ ಶ್ರೀ ಯಂ ಗಣಪತಿ ಭಟ್ ಮಾತನಾಡಿ ವರದಿ ಸಾಲಿನಲ್ಲಿ ಸಂಘವು ವಾರ್ಷಿಕ ವ್ಯವಹಾರದಲ್ಲಿ ರೂ 2,69, 830. 86 ನಿವ್ವಳ ಲಾಭ ಗಳಿಸಿದ್ದು ಅಡಿಟ್ ವರ್ಗಿಕರಣ ” ಎ “ದರ್ಜೆ ಪಡೆದಿದೆ. ಈ ಬೆಳವಣಿಗೆಗೆ ಕಾರಣರಾದ ಎಲ್ಲಾ ಸದಸ್ಯರನ್ನು ಅಭಿನಂದಿಸಿ, ಸದಸ್ಯರಿಗೆ ಪ್ರತಿ ಲೀಟರ್ ಹಾಲಿಗೆ 0. 50ಪೈಸೆ ಬೋನಸ್ ಮತ್ತು ಶೇ 20 ಡಿವಿಡೆಂಡ್ ನೀಡಲಾಗುವುದು ಎಂದರು.

ಸದಸ್ಯರು ಸಂಘ ಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಪೊರೈಸಿ ಸಂಘದ ಬೆಳವಣಿಗೆಗೆ ಕಾರಣರಾಗಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ನಮ್ಮ ಆಡಳಿತ ಮಂಡಳಿ ನಿರ್ಣಯದಂತೆ ಪ್ರತೀ ಲೀಟರ್ ಗೆ 0. 50 ಪೈಸೆಯಂತೆ ರೂ 6,652. 85 ಪ್ರೋತ್ಸಾಹಧನ ನೀಡಿರುವುದಾಗಿ ಹೇಳಿದರು. ವರದಿ ವರ್ಷದಲ್ಲಿ 180 ದಿನ ಹಾಲುಹಾಕಿದ ಸದಸ್ಯರಿಗೆ ಸ್ಟೀಲ್ ಪಾತ್ರೆ ನೀಡಲಾಯಿತು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಯಂ ನಾಗೇಶ ಪ್ರಭು, ಡಿ ಕೃಷ್ಣಾನಂದ ರಾವ್, ಶಂಕರನಾರಾಯಣ ಶರ್ಮ ಡಿ, ಪಿ ಗೋವಿಂದ ಭಟ್, ಯಂ ಶಂಭು ಶರ್ಮ, ರವಿಶಂಕರ ಪಿ, ಗಣೇಶ್ ಕೆ, ಯಂ ರಮೇಶ್ ನಾಯ್ಕ, ಹೆಲೆನ್ ಮೊಂತೆರೋ ಉಪಸ್ಥಿತರಿದ್ದರು. ಕನ್ಯಾನ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಘದ ಅಧ್ಯಕ್ಷರು ಎಲ್ಲರನ್ನೂ ಸ್ವಾಗತಿಸಿದರು. ಸಂಘ ದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ಕೆ ವರದಿ ವಾಚಿಸಿ ವರದಿ ವರ್ಷದ ಲೆಕ್ಕಪತ್ರ ಮಂಡಿಸಿದರು. ಸಹಾಯಕಿ ಹರಿಣಿ ಯಂ ಸಹಕರಿಸಿದರು. ಸಂಘ ದ ಉಪಾಧ್ಯಕ್ಷ ಯಸ್ ಬಿ ಕಣಿಯೂರು ಧನ್ಯವಾದವಿತ್ತರು.

astr
- Advertisement -

Related news

error: Content is protected !!